Thursday, June 4, 2026
Homeತಾಜಾ ಸುದ್ದಿಇಂದು ರಾತ್ರಿ 8-30ಕ್ಕೆ ದೇಶವನ್ನು ಉದ್ದೇಶಿಸಿ  ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಇಂದು ರಾತ್ರಿ 8-30ಕ್ಕೆ ದೇಶವನ್ನು ಉದ್ದೇಶಿಸಿ  ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ

- Advertisement -
- Advertisement -

ನವದೆಹಲಿ; ಇಂದು ರಾತ್ರಿ 8-30ಕ್ಕೆ ದೇಶವನ್ನು ಉದ್ದೇಶಿಸಿ  ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕುರಿತ ತಿದ್ದುಪಡಿ ಮಸೂದೆಗೆ ಸೋಲಾದ ಬೆನ್ನಲ್ಲೇ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮೋದಿ ಸರ್ಕಾರದ ಅಧಿಕಾರಕ್ಕೆ ಬಂದ್ಮೇಲೆ  ಇಲ್ಲಿಯವರೆಗೆ ಯಾವುದೇ ಮಸೂದೆಗೆ ಸೋಲಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾದ ಹಿನ್ನೆಲೆಯಲ್ಲಿ ಭಾಷಣದಲ್ಲಿ ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂಬ ಕುತೂಹಲ ಮೂಡಿದೆ.

ಈ ಹಿಂದೆ ನೋಟು ನಿಷೇಧ, ಕೋವಿಡ್‌ ಸಮಯದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ ಈಗ ಕೊಲ್ಲಿ ಯುದ್ಧ ನಡೆಯುತ್ತಿದ್ದರೂ ಸದ್ಯಕ್ಕೆ ನಿಂತಿದ್ದು ಅಮೆರಿಕ- ಇರಾನ್‌ ಜೊತೆ ಶಾಂತಿ ಮಾತುಕತೆ ಮತ್ತೆ ಆರಂಭವಾಗಿದೆ. ಈ ಕಾರಣಕ್ಕೆ ಮೋದಿ ಈ ವಿಚಾರದ ಬಗ್ಗೆ ಮಾತನಾಡುತ್ತಾರಾ? ಅಥವಾ ಬೇರೆ ವಿಷಯದ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆ ದೇಶವಾಸಿಗಳಲ್ಲಿ ಮೂಡಿದೆ.

- Advertisement -

Latest News

error: Content is protected !!