- Advertisement -
![]()
- Advertisement -
ನಟ, ರಾಜಕಾರಣಿ ವಿಜಯ್ ದಳಪತಿ ಅವರು ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇದೀಗ ಅವರಿಗೆ ಸಂಬಂಧಿಸಿದ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರ ವೇಳೆ ಅಭಿಮಾನಿಯೊಬ್ಬ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ವಿಜಯ್ ಭಾವಿಸಿದ್ದಾರೆ. ನಂತರ ತಕ್ಷಣವೇ ಸೈಕಲ್ ಬಿಟ್ಟು ಭದ್ರತಾ ಕಾರಿನತ್ತ ಓಡಿದ್ದಾರೆ. ಈ ಒಂದು ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ತಮ್ಮ Tamilaga Vettri Kazhagam ಪಕ್ಷದ ಪರವಾಗಿ ಸೈಕಲ್ ರೈಡ್ ನಡೆಸುತ್ತಿದ್ದರು. ಸಾವಿರಾರು ಅಭಿಮಾನಿಗಳ ನಡುವೆ ಅವರು ಸಾಗುತ್ತಿದ್ದ ವೇಳೆ, ಒಬ್ಬ ಅಭಿಮಾನಿ ಹೂವಿನ ಮಾಲೆಯನ್ನು ಅವರತ್ತ ಎಸೆದಿದ್ದಾನೆ. ಅದನ್ನು ಅಪಾಯಕಾರಿ ವಸ್ತು ಎಂದು ಭಾವಿಸಿದ ವಿಜಯ್ ತಕ್ಷಣ ಸೈಕಲ್ ಬಿಟ್ಟು ಅಲ್ಲಿಂದ ಓಡಿ ಭದ್ರತಾ ಕಾರಿನೊಳಗೆ ಸೇರಿದ್ದಾರೆ ಎನ್ನಲಾಗಿದೆ.
- Advertisement -


