- Advertisement -
![]()
- Advertisement -
ಸುಳ್ಯ: ಪೆರಾಜೆಯ ಕಲ್ಚರ್ಪೆಯಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆಯ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.
ಭಾನುವಾರ ತಡರಾತ್ರಿ ವೇಳೆ ಕಲ್ಚರ್ಪೆ ಎಂಬಲ್ಲಿ ಕಾಡಾನೆಯೊಂದು ತೋಟದ ಪಾಳು ಬಾವಿಗೆ ಆಯತಪ್ಪಿ ಬಿದ್ದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಸ್ಥಳದಲ್ಲಿದ್ದು ಆನೆಯನ್ನು ಮೇಲೆತ್ತಲು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಜೆಸಿಬಿ ಬಳಸಿ ಬಾವಿಯ ಒಂದು ಬದಿಯನ್ನು ಆಳ ಮಾಡಿ ರಕ್ಷಣಾ ಕಾರ್ಯಚರಣೆ ನಡೆಸಲಾಗಿತ್ತು.
ಸದ್ಯ ಆನೆಯನ್ನು ಮೇಲೆತ್ತುವ ಕಾರ್ಯಾಚರಣೆ ಮಧ್ಯಾಹ್ನ ವೇಳೆಗೆ ಯಶಸ್ವಿಯಾಗಿದೆ. ಆದರೆ ಅರಣ್ಯ ಇಲಾಖೆ ನಿರೀಕ್ಷಿಸಿದತ್ತ ತೆರಳದ ಕಾಡಾನೆ ಬಾವಿಯಿಂದ ಹೊರಬಂದು ತೋಟದತ್ತ ಹೋಗಿದೆ. ಈ ವೇಳೆ ಆನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸಿತ್ತಾದರೂ ಕೃಷಿತೋಟದತ್ತ ಆನೆ ತೆರಳಿದೆ ಎನ್ನಲಾಗಿದೆ.
- Advertisement -


