ಬೆಳ್ತಂಗಡಿ: ತಾಲೂಕಿನ ಸಮಗ್ರ ಅಭಿವೃದ್ಧಿಯ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಶಾಸಕ ಶ್ರೀ ಹರೀಶ್ ಪೂಂಜ ಅವರು, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ವಿವೇಚನಾ ಅನುದಾನದಡಿ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭಾರಿ ಮೊತ್ತದ ಅನುದಾನವನ್ನು ಮಂಜೂರು ಮಾಡಿದ್ದಾರೆ.
ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪುನರುತ್ಥಾನ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಶಾಸಕರು ಈ ಕ್ರಮ ಕೈಗೊಂಡಿದ್ದು, ಶಾಸಕರ ಈ ನೆರವು ಭಕ್ತಾದಿಗಳಲ್ಲಿ ಹರ್ಷ ಮೂಡಿಸಿದೆ.

ಅನುದಾನ ಹಂಚಿಕೆಯ ವಿವರಗಳು:ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ (ಗರ್ಡಾಡಿ ಗ್ರಾಮ): ಈ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಅತೀ ಹೆಚ್ಚಿನ ಮೊತ್ತವಾದ ರೂ. 1.00 ಕೋಟಿ ಅನುದಾನ ಮೀಸಲಿಡಲಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ (ಕರಾಯ ಗ್ರಾಮ): ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 20.00 ಲಕ್ಷ ಮಂಜೂರು.
ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ (ಉಜಿರೆ): ದೇವಸ್ಥಾನದ ವಿವಿಧ ಕೆಲಸಗಳಿಗಾಗಿ ರೂ. 10.00 ಲಕ್ಷ.
ಶ್ರೀ ಅನಂತೇಶ್ವರ ದೇವಸ್ಥಾನ (ಬಳ್ಳಮಂಜ): ಅಭಿವೃದ್ಧಿ ಕಾರ್ಯಕ್ಕೆ ರೂ. 10.00 ಲಕ್ಷ.
ಮಾಣೂರು ಶ್ರೀ ಧರ್ಮಶಾಸ್ತಾವು ದೇವಸ್ಥಾನ (ಮಚ್ಚಿನ): ಧಾರ್ಮಿಕ ಚಟುವಟಿಕೆಗಳ ವಿಸ್ತರಣೆಗೆ ರೂ. 10.00 ಲಕ್ಷ.
ನೆಕ್ಕರಡ್ಕ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನ (ಹತ್ಯಡ್ಕ): ಅಭಿವೃದ್ಧಿ ಕಾಮಗಾರಿಗೆ ರೂ. 5.00 ಲಕ್ಷ.
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕುಡುಮಡ್ಕ (ಚಿಬಿದ್ರೆ ಗ್ರಾಮ): ಮೂಲಸೌಕರ್ಯಕ್ಕಾಗಿ ರೂ. 5.00 ಲಕ್ಷ.
ಶಾಸಕ ಹರೀಶ್ ಪೂಂಜ ಅವರ ಈ ಜನಪರ ಮತ್ತು ಭಕ್ತಿಪೂರ್ವಕ ಕಾರ್ಯಕ್ಕೆ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


