ಬಂಟ್ವಾಳ; ಸಹಕಾರ ಸಂಘದ ಮಹಿಳಾ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜಾತಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿರುವ ಘಟನೆ ಬಂಟ್ವಾಳ ನೇರಳಕಟ್ಟೆಯಲ್ಲಿ ನಡೆದಿದೆ.
ಬಂಟ್ವಾಳ ನೆಟ್ಲಮುಡ್ನೂಡು ನಿವಾಸಿಯಾದ ಸೇಸಮ್ಮ (47) ರವರು ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ಬಂಟ್ವಾಳ ನೇರಳಕಟ್ಟೆಯಲ್ಲಿರುವ ಸಹಕಾರ ಸಂಘದ ಸಿಬ್ಬಂದಿಯಾಗಿರುತ್ತಾರೆ. ದಿನಾಂಕ -02-04-2026 ರಂದು ಅವರು ಕರ್ತವ್ಯದಲ್ಲಿದ್ದಾಗ, ಶಾಖೆಯ ಪ್ರಭಾರ ವ್ಯವಸ್ಥಾಪಕನಾದ ಆರೋಪಿ ಯತೀಶ್ ಡಿ ಗೌಡ ಎಂಬವರು ಬಂದು ಏಕಾಏಕಿ ಸೇಸಮ್ಮ ಅವರಿಗೆ ಕರ್ತವ್ಯ ನಿರ್ವಹಿಸಬಾರದು ಎಂದು ತಿಳಿಸಿದ್ದು, ಅದಕ್ಕೆ ಸೇಸಮ್ಮ ಅವರು ಆಕ್ಷೇಪಿಸಿದಾಗ, ಆರೋಪಿಯು ಸೇಸಮ್ಮರನ್ನು ಕೈಯಿಂದ ತಳ್ಳಿ ಜಾತಿ ನಿಂದನೆ ಮಾಡಿರುತ್ತಾರೆ ಆ ಬಳಿಕ ದಿನಾಂಕ:07-04- 2026 ರಂದು ಬೆಳಿಗ್ಗೆ, ಸೇಸಮ್ಮ ಅವರು ಪುನಃ ಕರ್ತವ್ಯಕ್ಕೆ ಹಾಜರಾದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಇದರಿಂದ ಸೇಸಮ್ಮ ಅವರು ಮನನೊಂದು ಅಸ್ವಸ್ಥಳಾಗಿ ಕಚೇರಿಯಲ್ಲಿ ಬಿದ್ದವರನ್ನು ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಸಂಘದ ಪದಾಧಿಕಾರಿಗಳಾದ ಯಶೋಧ, ಪುಷ್ಪರಾಜ್ ಚೌಟ ಹಾಗೂ ಯತೀಶ್ ಡಿ ಗೌಡ ಎಂಬವರ ವಿರುದ್ಧ ಸೇಸಮ್ಮ ಅವರು ದಿನಾಂಕ: 11-04-2026 ರಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 88/2026, ಕಲಂ: 74, 49 BNS 2023 ಮತ್ತು ಕಲಂ: 3(1) (r) (s), 3(2)(va) The SC & ST (Prevention of Atrocities) Amendment Act 2015 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


