ಸುಳ್ಯದಲ್ಲಿ ಚಿನ್ನದ ಕದ್ದು ಪರಾರಿಯಾದ ಮಹಿಳೆಯನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿರುವ ಘಟನೆ ನಡೆದಿದೆ. ಶೃತಿ @ ವಿಶ್ಮೀತ(37) ಬಂಧಿತ ಮಹಿಳೆ.
ಪ್ರಕರಣದ ವಿವರ;
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ(20) ಎಂಬವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು. ಅದರಂತೆ ನನ್ನ ತಂದೆಗೆ ಆರೋಪಿ ಶೃತಿ ಜೊತೆ ಸಂಪರ್ಕವಿದ್ದು ಆಕೆಗೆ ತಂದೆ ಸಾಲವಾಗಿ ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಹಣ ವಾಪಾಸ್ ನೀಡಲು ಪುಣ್ಯಶ್ರೀ ಶೃತಿ ಹೇಳಿದ್ದರಿಂದ ಆಕೆ ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ದಿನಾಂಕ:07.04.2026 ರಂದು ಪುಣ್ಯಶ್ರೀ ಮನೆಗೆ ಬಂದಿದ್ದಾಳೆ. ಆ ಆಬಳಿಕ ಶೃತಿ ಕೆಲಸಕ್ಕೆ ತೆರಳಿದ್ದು, ರಾತ್ರಿ ಮನೆಯ ಕಪಾಟಿನ ಬೀಗದ ಕೀ ಬಿದ್ದಿರುವುದನ್ನು ಕಂಡು ಕಪಾಟನ್ನು ಪರಿಶೀಲಿಸಿದಾಗ ಮನೆಯಲ್ಲಿದ್ದ ರೂ 500000/- ಮೌಲ್ಯದ ಸುಮಾರು 62 ½ ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿರುವುದು ಗೊತ್ತಾಗಿದೆ. ಕೂಡಲೇ ಪುಣ್ಯಶ್ರೀ ಶೃತಿ ವಿರುದ್ಧ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಶೃತಿ @ ವಿಸ್ಮಿತಾ ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಕಳವಾದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.


