Thursday, June 4, 2026
Homeಕರಾವಳಿ2025-26ರ ಹಣಕಾಸು ವರ್ಷದಲ್ಲಿ ಎಂಸಿಸಿ ಬ್ಯಾಂಕ್‌ಗೆ ₹13 ಕೋಟಿ ಲಾಭ

2025-26ರ ಹಣಕಾಸು ವರ್ಷದಲ್ಲಿ ಎಂಸಿಸಿ ಬ್ಯಾಂಕ್‌ಗೆ ₹13 ಕೋಟಿ ಲಾಭ

- Advertisement -
- Advertisement -

ಮಂಗಳೂರು: ಎಂಸಿಸಿ ಬ್ಯಾಂಕ್ 31 ಮಾರ್ಚ್ 2026ರ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ರೂ. 13 ಕೋಟಿ ಲಾಭವನ್ನು ದಾಖಲಿಸಿದೆ.

ಈ ವರ್ಷ ತನ್ನ 114ನೇ ವರ್ಷದ ಸೇವೆಯನ್ನು ಪೂರೈಸಲಿದೆ.

ಇನ್ನು ಬ್ಯಾಂಕಿನ ಒಟ್ಟು ವ್ಯವಹಾರ ರೂ.1525 ಕೋಟಿಗೆ ತಲುಪಿದ್ದು, 23% ವೃದ್ಧಿ ಸಾಧಿಸಿದೆ ಎನ್ನಲಾಗಿದ್ದು, 2018ನೇ ವರ್ಷದಲ್ಲಿ ಬ್ಯಾಂಕಿನ ಚುಕ್ಕಾಣಿ ಹಿಡಿದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ ರೂ.500 ಕೋಟಿ ಇದ್ದ ಬ್ಯಾಂಕಿನ ಒಟ್ಟು ವ್ಯವಹಾರವು ಕಳೆದ ಏಳೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು 114 ವರ್ಷದ ಇತಿಹಾಸವಿರುವ ಬ್ಯಾಂಕಿನ ಚರಿತ್ರೆಯಲ್ಲಿಯೇ ದಾಖಲೆಯಾಗಿದೆ.

ಬ್ಯಾಂಕಿನ ನೆಟ್‌ವರ್ತ್ ರೂ.83.76 ಕೋಟಿಯಿಂದ ರೂ.91.80 ಕೋಟಿಗೆ ಏರಿಕೆಯಾಗಿದೆ.

2026-27ನೇ ವರ್ಷದಲ್ಲಿ 4 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ಹಾಕಲಾಗಿದ್ದು, ಶಾಖೆಗಳ ಸಂಖ್ಯೆಗಳು 25ಕ್ಕೆ ಏರಲಿವೆ. ಈಗಾಗಲೇ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಮತ್ತು 23ನೇ ಶಾಖೆಯನ್ನು ಕಟಪಾಡಿಯಲ್ಲಿ ತೆರೆಯಲು ಅನುಮತಿ ಸಿಕ್ಕಿರುತ್ತದೆ.

- Advertisement -

Latest News

error: Content is protected !!