Thursday, June 4, 2026
Homeಕರಾವಳಿಮಂಗಳೂರುಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಕುಟುಂಬ ಸಮೇತ ಭೇಟಿ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಕುಟುಂಬ ಸಮೇತ ಭೇಟಿ

- Advertisement -
- Advertisement -

ಸುಬ್ರಹ್ಮಣ್ಯ; ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ (ಏಪ್ರಿಲ್ 6) ರಂದು ಭೇಟಿ  ನೀಡಿದರು.

ಪತ್ನಿ ಪ್ರಗತಿ ಶೆಟ್ಟಿ, ತಾಯಿ ರತ್ನಾವತಿ ಹಾಗೂ ಮಕ್ಕಳೊಂದಿಗೆ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಅವರು, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊಸಳ್ಳಿಗಮ್ಮ ದೇವಿಯ ಸನ್ನಿಧಿಗೂ ಭೇಟಿ ನೀಡಿದರು.

ಮಧ್ಯಾಹ್ನದ ವೇಳೆ ನಡೆದ ಶ್ರೀ ದೇವರ ಮಹಾಪೂಜೆಯಲ್ಲಿ ರಿಷಭ್ ಮತ್ತು ಕುಟುಂಬಸ್ಥರು ಭಾಗಿಯಾದರು. ಅರ್ಚಕರು ನೀಡಿದ ಮಂತ್ರಾಕ್ಷತೆ ಹಾಗೂ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದ ಅವರು ಕೆಲ ಹೊತ್ತು ದೇಗುಲದಲ್ಲಿ ಸಮಯ ಕಳೆದು ಬಳಿಕ ತೆರಳಿದರು.

- Advertisement -

Latest News

error: Content is protected !!