Thursday, June 4, 2026
Homeಕರಾವಳಿಮಂಗಳೂರುಸುಳ್ಯ : ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿ ಕಳ್ಳತನ: ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ...

ಸುಳ್ಯ : ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿ ಕಳ್ಳತನ: ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಸುಳ್ಯ : ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿಯನ್ನು ಕಳ್ಳನೊಬ್ಬ ಕಳ್ಳತನ ಮಾಡಿದ್ದು ಆತನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾರ್ಚ್ 30ರಂದು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮಸೀದಿಯ ಆವರಣಕ್ಕೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿದ್ದ ಹರಕೆ ಹುಂಡಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಆರೋಪಿಯು ನೀಲಿ ಬಣ್ಣದ ಟಿ-ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವುದು ಕಂಡುಬಂದಿದೆ. ಈ ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

- Advertisement -

Latest News

error: Content is protected !!