- Advertisement -
![]()
- Advertisement -
ಬೆಂಗಳೂರು: ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ವಯಸ್ಸಿನ ವಿನಾಯಿತಿಯನ್ನು ರಾಜ್ಯ ಸರ್ಕಾರ ಇಂದು ಘೋಷಿಸಿದೆ.
ವಿಧಾನಸಭೆಯಲ್ಲಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ 60 ದಿನಗಳ ವಯಸ್ಸಿನ ವಿನಾಯಿತಿಯನ್ನು ಘೋಷಣೆ ಮಾಡಿದ್ದಾರೆ
ಇದುವರೆಗೆ ಮಕ್ಕಳು ಒಂದನೇ ತರಗತಿ ಸೇರಲು ಆರು ವರ್ಷ ವಯಸ್ಸು ಕಡ್ಡಾಯ ಮಾಡಲಾಗಿತ್ತು. ಪೋಷಕರ ಮನವಿ ಮೇರೆಗೆ ಇದೀಗ 5 ವರ್ಷ 10 ತಿಂಗಳ ಮಕ್ಕಳೂ ಶಾಲೆಗೆ ದಾಖಲಾಗಲು ಅನುಮತಿ ನೀಡಲಾಗಿದೆ.
ಈ ಸಂಬಂಧವಾಗಿ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ತಂತ್ರಾಂಶದಲ್ಲಿ ಕೂಡಾ ಬದಲಾವಣೆ ತರುವುದಾಗಿ ಸ್ಪಷ್ಟನೆ ನೀಡಿರುವ ಸಚಿವ ಮಧು ಬಂಗಾರಪ್ಪ, ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳ ದಾಖಲಾತಿಗೂ ಇರುವ ತೊಂದರೆಯನ್ನು ಗಮನಿಸಿ ಅದನ್ನೂ ಬದಲಾವಣೆ ಮಾಡುವುದಾಗಿ ಸದನದಲ್ಲಿ ಭರವಸೆ ನೀಡಿದ್ದಾರೆ.
- Advertisement -


