Thursday, June 4, 2026
Homeಕರಾವಳಿಮಂಗಳೂರುಸುಳ್ಯ: ಕಳ್ಳತನ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಸುಳ್ಯ: ಕಳ್ಳತನ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

- Advertisement -
- Advertisement -

ಸುಳ್ಯ:ದಿನಾಂಕ 16/05/2018 ರಂದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿ ತುಮಕೂರು ನಿವಾಸಿ ಅಶ್ವನ್ ಗೌಡ ಜೆ ಪಿ ಎಂಬಾತ ಅಪರಾಧ ಎಸಗಿರುವುದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಬೀತಾಗಿದ್ದು, ಆತನ ಬಳಿಕ ಜಾಮೀನಿನ ಮೇಲೆ ಬಿಡುಗೆಡೆಯಾಗಿದ್ದ. ಆದರೆ ಆ ಬಳಿಕ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಹಾಗಾಗಿ, ವಾರೆಂಟ್ ಜಾರಿಯಾಗಿತ್ತು.

ಅದರಂತೆ ದಿನಾಂಕ 24/03/2026 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ HC 369 ಮಹೇಶ್ & PC 475 ಕಿರಣ ರವರುಗಳ ತಂಡ,  ತುಮಕೂರು ಗುಂಗೂರುಮಳೆ ಎಂಬಲ್ಲಿ ಆರೋಪಿಯನ್ನು ಬಂಧಿಸಿ, Prl CJ and JMFC ನ್ಯಾಯಾಲಯ ಸುಳ್ಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್ ರವರು ಆರೋಪಿಗೆ ಕಲಂ 380 IPC ಅಡಿಯಲ್ಲಿ ಒಂದು ವರ್ಷ ಸಾಧಾರಣ ಸಜೆಯನ್ನು ಹಾಗೂ 1000 ರೂ ದಂಡವನ್ನು  ವಿಧಿಸಿದ್ದು ಒಂದು ವೇಳೆ ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು ನೀಡಿ ಆದೇಶ ಹೊರಡಿಸಿರುತ್ತಾರೆ.

ಈ ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಿ ಎಮ್ ಸಿ ರವರು ಸಮರ್ಥವಾಗಿ ವಾದ ಮಂಡಿಸಿದ್ದಾರೆ.

- Advertisement -

Latest News

error: Content is protected !!