Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಸೇವಾ ನಿವೃತ್ತಿ ಹೊಂದಲಿರುವ ತಾಲೂಕು ಪಂಚಾಯತಿಯ ಅಧೀಕ್ಷಕ ಡಿ ಪ್ರಶಾಂತ್ ಅವರಿಗೆ ಸನ್ಮಾನ

ಬೆಳ್ತಂಗಡಿ; ಸೇವಾ ನಿವೃತ್ತಿ ಹೊಂದಲಿರುವ ತಾಲೂಕು ಪಂಚಾಯತಿಯ ಅಧೀಕ್ಷಕ ಡಿ ಪ್ರಶಾಂತ್ ಅವರಿಗೆ ಸನ್ಮಾನ

- Advertisement -
- Advertisement -

ಬೆಳ್ತಂಗಡಿ; ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿಯ ಮಾಸಿಕ ಸಮಿತಿ ಸಭೆಯಲ್ಲಿ ಈ ತಿಂಗಳ ಅಂತ್ಯದಲ್ಲಿ ಸೇವಾ ನಿವೃತ್ತಿ ಹೊಂದಲಿರುವ  ತಾಲೂಕು ಪಂಚಾಯತಿಯ ಅಧೀಕ್ಷಕರಾದ ಡಿ ಪ್ರಶಾಂತ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಇಲಾಖಾಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ  ಶ್ರೀಮತಿ ಸೌಮ್ಯ ಲಾಯಿಲ, ಶ್ರೀಮತಿ ಮೆರಿಟಾ ಪಿಂಟೋ, ವೀರಪ್ಪ ಮೊಯ್ಲಿ, ವಾಸುದೇವ ರಾವ್, ವಿಜಯಗೌಡ ಬೆಳಾಲು, ಶರೀಫ್ ಸಬರಬೈಲ್, ಕೆ.ನೇಮಿರಾಜ್ ಕಿಲ್ಲೂರು,  ಶ್ರೀಮತಿ ವಂದನಾ, ಸತೀಶ್ ಹೆಗ್ಡೆ, ಕೇಶವ ನಾಯ್ಕ್ ಹಾಗೂ ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸಿಕ್ವೇರವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!