Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ; ಯುವಕ ಹಾಗೂ ಸಹೋದರಿ ವಿರುದ್ಧ ಪ್ರಕರಣ...

ಬೆಳ್ತಂಗಡಿ : ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ; ಯುವಕ ಹಾಗೂ ಸಹೋದರಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯ ಖಾಸಗಿ ವಿಡಿಯೋವನ್ನು ಪಡೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ ಬಗ್ಗೆ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿಯ ಖಾಸಗಿ ಉದ್ಯೋಗಿಯಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ಸುಶಾಂತ ಪೂಜಾರಿ ಎಂಬ ಯುವಕ ಪರಿಚಯವಾಗಿದ್ದು ಇವರಿಬ್ಬರು ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ  ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂದರ್ಭದಲ್ಲಿ ಆತ ಯುವತಿಯ ಖಾಸಗಿ ವಿಡಿಯೋ ನೀಡುವಂತೆ ನಿರಂತರ ಪೀಡಿಸುತ್ತಿದ್ದ. ಒಮ್ಮೆ ಸ್ನಾನ ಮಾಡುವ ವೇಳೆ ಆಕೆ ಆತನಿಗೆ ವಿಡಿಯೋ ಕಾಲ್ ಮಾಡಿದ್ದು ಆತ ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು ಇದಾದ ಬಳಿಕ ಈ ವಿಡಿಯೋವನ್ನು ಸಮಾಜಿಕ‌ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದಕ್ಕೆ ಈತನ ಸಹೋದರಿಯೂ ಸಹಕಾರ ನೀಡಿದ್ದಾಳೆ ಎಂದು  ನೊಂದ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಸಿ & ಎಸ್.ಟಿ ಕಾಯ್ದೆಯ ಅಡಿಯಲ್ಲಿ ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಮಾ.24 ರಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!