- Advertisement -
![]()
- Advertisement -
ಬೆಳ್ತಂಗಡಿ: ಮಂಗಳೂರು ನಗರದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 2025 ನೇ ಸಾಲಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಯಲ್ಲಿ ಕಲಂ 353 (1), 353(2), 61 (2), 55 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ “Terrorism has religion and so called Terrorists too. Its Islam” ಎಂದೂ ಮತ್ತು ಇದೇ ರೀತಿಯ ಕೆಲವು ಫೋಸ್ಟ್ ಗಳನ್ನು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಶಿರ್ಲಾಲು ನಿವಾಸಿಯಾಯಾಗಿರುವ ಯುವತಿಯೊಬ್ಬಳು ಹಂಚಿಕೊಂಡ ಬಗ್ಗೆ ತನಿಖೆಯಲ್ಲಿ ಕಂಡು ಬಂದಿದ್ದು, ಈ ದಿನ ದಿನಾಂಕ 19-03-2026 ರಂದು ಆಕೆಯನ್ನು ಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೊಬೈಲ್ ಮತ್ತು ಪೋಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ಯುವತಿ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.
- Advertisement -


