Friday, June 5, 2026
Homeಕರಾವಳಿಉಡುಪಿಉಡುಪಿ: ಅಂಗಡಿಗೆ ಅಂತಾ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆ

ಉಡುಪಿ: ಅಂಗಡಿಗೆ ಅಂತಾ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆ

- Advertisement -
- Advertisement -

ಉಡುಪಿ: ಅಂಗಡಿಗೆ ಅಂತಾ ಹೋದ ವ್ಯಕ್ತಿ ಮನೆಗೆ ವಾಪಾಸ್ ಬಾರದೇ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಂಜುನಾಥ ಎಮ್.ಡಿ. (45) ನಾಪತ್ತೆಯಾದವರು.

ಮಂಜುನಾಥ ಎಮ್.ಡಿ. (45) ರವರು ದಿನಾಂಕ 11/03/2026 ರಂದು ಮಧ್ಯಾಹ್ನ:12:45 ಗಂಟೆಗೆ ಅಂಗಡಿಗೆ ಹೋಗಿ ಬರತ್ತೇನೆಂದು ಮನೆಯಿಂದ ಹೋದವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಇದೇ ರೀತಿ ಹಲವಾರು ಬಾರಿ ಬಿಟ್ಟು ಹೋಗಿರುತ್ತಾರೆ. ಕಾಣೆಯಾದ ಮಂಜುನಾಥ ಎಮ್.ಡಿ. ವಾಪಾಸ್ ಬರಬಹುದು ಎನ್ನುವಾ ಉದ್ದೇಶದಿಂದ ಮತ್ತು ಸಂಬಂಧಿಕರಿಗೆ ದೂರವಾಣಿ ಕರೆಮಾಡಿ ವಿಚಾರಿಸಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಂಬಂಧಿಕರ ಮನೆಗೂ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅವರ ಪತ್ನಿ ಅನ್ನಪೂರ್ಣ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!