Thursday, June 4, 2026
Homeತಾಜಾ ಸುದ್ದಿರೀಲ್ಸ್ ಹುಚ್ಚಿಗಾಗಿ ಅಪ್ಪನನ್ನೇ ಪಾರ್ಸೆಲ್ ಮಾಡಲು ಬಂದ ಮಗಳು;ಕೆಲವೇ ಹೊತ್ತಲ್ಲೇ ಹುಚ್ಚು ಬಿಡಿಸಿದ ಪೊಲೀಸರು

ರೀಲ್ಸ್ ಹುಚ್ಚಿಗಾಗಿ ಅಪ್ಪನನ್ನೇ ಪಾರ್ಸೆಲ್ ಮಾಡಲು ಬಂದ ಮಗಳು;ಕೆಲವೇ ಹೊತ್ತಲ್ಲೇ ಹುಚ್ಚು ಬಿಡಿಸಿದ ಪೊಲೀಸರು

- Advertisement -
- Advertisement -

ಬೆಂಗಳೂರು;ಸೋಷಿಯಲ್ ಮೀಡಿಯಾದಲ್ಲಿ ವ್ಯೂವ್ಸ್ ಪಡೆಯಬೇಕು, ವೈರಲ್ ಆಗ್ಬೇಕು ಮಹಿಳೆಯೊಬ್ಬಳು ವೃದ್ಧ ತಂದೆಯನ್ನೇ ಕೊರಿಯರ್ ನಲ್ಲಿ ಪಾರ್ಸೆಲ್ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ವಯಾಲಿಕಾವಲ್  ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಕಚೇರಿಯೊಂದಕ್ಕೆ ಮಂಗಳವಾರ ಐವರು ಸದಸ್ಯರ ಕುಟುಂಬವೊಂದು ಬಂದಿತ್ತು. ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿ ದೊಡ್ಡದೊಂದು ಪಾರ್ಸೆಲ್ ಹೊತ್ತುಕೊಂಡು ಬಂದಿದ್ದರು. ಪಾರ್ಸೆಲ್ ಗಾತ್ರ ದೊಡ್ಡದಾಗಿದ್ದರಿಂದ ಅನುಮಾನಗೊಂಡ ಕೊರಿಯರ್ ಸಿಬ್ಬಂದಿ, ‘ಒಳಗೆ ಏನಿದೆ?’ ಎಂದು ಪ್ರಶ್ನಿಸಿದ್ದಾರೆ. ಆದರೆ ಕುಟುಂಬದವರು  ಉತ್ತರ ನೀಡಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ಓಪನ್ ಮಾಡಿ ನೋಡಿದ್ದಾರೆ. ಆ ವೆಳೆ ಅರೆಕ್ಷಣ ಅವರು ಬೆಚ್ಚಿಬಿದ್ದಿದ್ದು, ವೃದ್ಧ ವ್ಯಕ್ತಿಯೋರ್ವರು ಚೀಲದಲ್ಲಿ ಇರೋದು ಗೊತ್ತಾಗಿದೆ. ಆತ ಕೊರಿಯರ್ ಮಾಡಲು ಬಂದಿದ್ದ ಕುಟುಂಬದ ಪೈಕಿ ಮಹಿಳೆಯ ತಂದೆ ಎಂಬುದು ತಿಳಿದುಬಂದಿದೆ. ಅವರು ಚೀಲದಲ್ಲಿ ಉಸಿರಾಡಲೂ ಕಷ್ಟ ಪಡುತ್ತಿದ್ದರು.ಹೀಗಿದ್ದರೂ ಕುಟುಂಬದವರು ಮಾತ್ರ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು, ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇವರ ಹುಚ್ಚಾಟದ ಬಗ್ಗೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರೂ, ಇಷ್ಟು ದೂರ ಬಂದು ಇಷ್ಟು ಕಷ್ಟಪಟ್ಟಿದ್ದೇವೆ. ದಯವಿಟ್ಟು ಪಾರ್ಸೆಲ್ ತೆಗೆದುಕೊಳ್ಳಿ ಎಂದು ಮತ್ತೆ ಮೊಂಡುತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಖಾಕಿ, ಕುಟುಂಬಸ್ಥರನ್ನು ಠಾಣೆಗೆ ಕರೆದೊಯ್ದಿದೆ. ತಮ್ಮದು ತಪ್ಪಾಯ್ತು ಎಂದು ಕುಟುಂಬಸ್ಥರು ಕ್ಷಮೆಯಾಚನೆ ಮಾಡಿದ ವಿಡಿಯೋ ದಾಖಲಿಸಿಕೊಂಡ ಪೊಲೀಸರು, ಗಂಭೀರ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

- Advertisement -

Latest News

error: Content is protected !!