Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ: ಪ್ರಕರಣವೊಂದರಲ್ಲಿ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ಬಂಟ್ವಾಳ: ಪ್ರಕರಣವೊಂದರಲ್ಲಿ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

- Advertisement -
- Advertisement -

ಬಂಟ್ವಾಳ: ಪ್ರಕರಣವೊಂದರಲ್ಲಿ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕೇರಳದ ಎರ್ನಾಕುಲಂ ಜಿಲ್ಲೆಯ ಪ್ರಿನ್ಸ್ ಟಿ ಜೆ ಜೋಶ್ (43) ಬಂಧಿತ ಆರೋಪಿ.

ಈತನನ್ನು ಕೇರಳ ರಾಜ್ಯದ ಕುಟ್ಟಂಪುಝ ಎಂಬಲ್ಲಿ ಆರೋಪಿಯನ್ನು ದಿನಾಂಕ:13-03-2026 ರಂದು ಬಂಧಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಬಂಟ್ವಾಳ ASP ಯಶ್ ಕುಮಾರ್ ಶರ್ಮಾ IPS ರವರ ನಿರ್ದೇಶನದಂತೆ ಪೊಲೀಸ್ ಉಪ ನಿರೀಕ್ಷಕರುಗಳಾದ ಮಂಜುನಾಥ ಟಿ   ರವರ ಮಾರ್ಗದರ್ಶನದಲ್ಲಿ   ಪೊಲೀಸ್ ಉಪ ನಿರೀಕ್ಷಕರಾದ ಕೃಷ್ಣಕಾಂತ ಕೆ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ 314 ಸಂತೋಷ್ ಪಿಸಿ 2462 ಶಿವಾನಂದ ಮಡ್ಡಿ ರವರು ಕಾರ್ಯ ನಿರ್ವಹಿಸಿರುತ್ತಾರೆ.

- Advertisement -

Latest News

error: Content is protected !!