Thursday, June 4, 2026
Homeಕರಾವಳಿಮಂಗಳೂರು ಬೆಳ್ತಂಗಡಿ : ಸುಲ್ಕೇರಿ ಮೊಗ್ರು ಮಾಳಿಗೆ ಬೈಲಿನ ಉಳಿದ ಮನೆಗಳಿಗೂ ವಿದ್ಯುತ್ ಭಾಗ್ಯ, ಸರ್ಕಾರದಿಂದ ಅನುದಾನ...

 ಬೆಳ್ತಂಗಡಿ : ಸುಲ್ಕೇರಿ ಮೊಗ್ರು ಮಾಳಿಗೆ ಬೈಲಿನ ಉಳಿದ ಮನೆಗಳಿಗೂ ವಿದ್ಯುತ್ ಭಾಗ್ಯ, ಸರ್ಕಾರದಿಂದ ಅನುದಾನ ಬಿಡುಗಡೆ, ಕೆಲಸ ಪ್ರಾರಂಭ : ರಕ್ಷಿತ್ ಶಿವರಾಂ ಹೇಳಿಕೆ

- Advertisement -
- Advertisement -

 ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿ ಮೊಗ್ರೂ ಮಾಳಿಗೆ ಬೈಲು ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ ಸರ್ಕಾರ, ಈಗ ಇನ್ನಿತರೆ 16 ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲು ಮುಂದಾಗಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಸರಣಿ ಸಭೆಗಳ ನಂತರ ಅಡವಿಯಲ್ಲಿರುವ ಮತ್ತು ರಾಷ್ಟ್ರೀಯ ಉದ್ಯಾನವನದ ಹಂಚಿನಲ್ಲಿರುವ ಕುಟುಂಬಗಳಿಗೆ ಮೂಲ ಸೌಕರ್ಯ ಒದಗಿಸುವ ನಟಿ ನಲ್ಲಿ ಸ್ವಾತಂತ್ರ್ಯದ ಬಳಿಕ ಪ್ರಪ್ರಥಮ ಬಾರಿಗೆ ಈ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಈಗ ಇತರೆ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲು 26.6 ಲಕ್ಷ ಅನುದಾನ ನೀಡಿ ವಿದ್ಯುತ್ ಕಂಬಗಳನ್ನು ಹಾಕುವ ಕೆಲಸ ಭರದಿಂದ ಸಾಗಿದೆ. ಬಹುದಿನಗಳಿಂದ ಬೇಡಿಕೆ ಇದ್ದ ಕದಿರೇಶ್ವರ ದೇವಾಲಯಕ್ಕೂ ಕೂಡ ವಿದ್ಯುತ್ ಸಂಪರ್ಕವನ್ನು ನೀಡುವ ಕೆಲಸ ಪ್ರಾರಂಭವಾಗಿದೆ ಇದರಿಂದ ಬಹುಕಾಲದಿಂದ ಕತ್ತಲೆಯಲ್ಲಿ ಜೀವನ ಮಾಡುತ್ತಿದ್ದ ಕುಟುಂಬಗಳ ಮನೆಯಲ್ಲಿ ದೀಪ ಉರಿಯುವ ಕೆಲಸವನ್ನು ಸರ್ಕಾರ ಮಾಡಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಈ ನಿಟ್ಟಿನಲ್ಲಿ ಸುದೀರ್ಘವಾಗಿ ಕೆಲಸ ಮಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ ಮತ್ತು ಅವರ ತಂಡದ ಕಾರ್ಯವೈಕರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

Latest News

error: Content is protected !!