Saturday, June 6, 2026
Homeತಾಜಾ ಸುದ್ದಿಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 22ನೇ ಕಂತಿನ ಹಣ ಇಂದು ಬಿಡುಗಡೆ; ರಾಜ್ಯದ 41.40 ಲಕ್ಷ...

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 22ನೇ ಕಂತಿನ ಹಣ ಇಂದು ಬಿಡುಗಡೆ; ರಾಜ್ಯದ 41.40 ಲಕ್ಷ ರೈತರ ಖಾತೆಗೆ ನೇರ ಹಣ ವರ್ಗಾವಣೆ

- Advertisement -
- Advertisement -

​ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 22ನೇ ಕಂತಿನ ಹಣ ಇಂದು ಬಿಡುಗಡೆಯಾಗಲಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ದೇಶಾದ್ಯಂತದ ರೈತರಿಗೆ 22ನೇ ಕಂತಿನ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ

​ಕರ್ನಾಟಕ ರಾಜ್ಯದ ಒಟ್ಟು 41,40,106 ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.ಕೇಂದ್ರ ಸರ್ಕಾರವು ರಾಜ್ಯದ ರೈತರಿಗಾಗಿ ಒಟ್ಟು 828.02 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ.

ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಅರ್ಹ ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಬಹುದಾಗಿದೆ.

- Advertisement -

Latest News

error: Content is protected !!