Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆ

ಮಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆ

- Advertisement -
- Advertisement -

ಮಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರಿನ ಬಂದರ್ ಪ್ರದೇಶದ ಮಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಪನಾ(18)  ನಾಪತ್ತೆಯಾದಾಕೆ. ಸಪನಾ  ಮಾರ್ಚ್ 6 ರಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಆಕೆಯ ತಾಯಿ ಚಮೇಲಿ ದೇವಿ ಎಂಬವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಪನಾ ಅವರು 4 ಅಡಿ 8 ಇಂಚು ಎತ್ತರ, ಸಾಧಾರಣ ಕಪ್ಪು ಮೈಬಣ್ಣ, ಬಿಳಿ ಬಣ್ಣದ ನೆಟ್ ಇರುವ ಚೂಡಿದಾ‌ರ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಹಿಂದಿ ಮತ್ತು ಭೋಜ್‌ಪುರಿ ಭಾಷೆ ಮಾತನಾಡುತ್ತಾಳೆ. ಈ ಯುವತಿ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್‌ ಠಾಣೆಗೆ ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ ಗೆ ಮಾಹಿತಿಯನ್ನು ನೀಡಲು ಕೋರಲಾಗಿದೆ.

ಚಮೇಲಿ ದೇವಿ ಅವರು ತೋಟ ಬೆಂಗ್ರಯ ಬಾಡಿಗೆ ಮನೆಯಲ್ಲಿ 2 ವರ್ಷಗಳಿಂದ ವಾಸಮಾಡಿಕೊಂಡಿದ್ದು, ಅವರ ಪುತ್ರಿ ಸಪನಾ ಸುಮಾರು 6-7 ತಿಂಗಳಿನಿಂದ ಮಂಗಳೂರಿನ ಬಂದರ್ ನಲ್ಲಿರುವ ಮಾರ್ಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿ ರಾತ್ರಿ 8 ಗಂಟೆಯ ಹೊತ್ತಿಗೆ ಮನೆಗೆ ವಾಪಸಾಗುತ್ತಿದ್ದಳು.

ಮಾರ್ಚ್ 6 ರಂದು ಬೆಳಗ್ಗೆ 9 ಗಂಟೆಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆಂದು ಬಂದರಿನಲ್ಲಿರುವ ಮಾರ್ಟ್ ಗೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ರಾತ್ರಿಯಾದರೂ ಮನೆಗೆ ವಾಪಸಾಗಿಲ್ಲ. ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿಲ್ಲ. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!