Saturday, June 6, 2026
Homeಕರಾವಳಿಮಂಗಳೂರುಪುತ್ತೂರು : ಉಪ್ಪಿನಂಗಡಿಯಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರ ದಾಳಿ; ಮೂವರ ವಿರುದ್ಧ ಪ್ರಕರಣ...

ಪುತ್ತೂರು : ಉಪ್ಪಿನಂಗಡಿಯಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರ ದಾಳಿ; ಮೂವರ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು : ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುತೇಶ್‌ ಕೆ ಪಿ ನೇತೃತ್ವದ ಸಿಬ್ಬಂದಿ ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿ ಮಾ.3 ರಂದು ಸಂಜೆ ರಸ್ತೆ ಬದಿಯಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂರು ಜನ ಆರೋಪಿಗಳನ್ನು ಹಿಡಿದು ವಿಚಾರಿಸಲಾಗಿ, ಕಡಬ ನಿವಾಸಿ ಸತೀಶ್‌ (38), ಬಂಟ್ವಾಳ ನಿವಾಸಿ ಮುರಳಿ (30) ಹಾಗು ಪುತ್ತೂರು ನಿವಾಸಿ ಮೋನಪ್ಪ ಕೆ (36), ಎಂಬವರಾಗಿದ್ದು. ಅವರಲ್ಲಿ ವಿಚಾರಿಸಿದಾಗ ದೇರಣ್ಣ ಮತ್ತು ಉಮೇಶ್‌ ಎಂಬವರುಗಳು ಕೋಳಿ ಅಂಕ ನಡೆಸುತ್ತಿರುವುದು ಗೊತ್ತಾಗಿದೆ. ದಾಳಿ ವೇಳೆ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ ಐದು ಹುಂಜ ಕೋಳಿಗಳನ್ನು, ಎರಡು ಬಾಲುಗಳನ್ನು, ಆರೋಪಿಗಳು ಪಣವಾಗಿ ಇಟ್ಟಿದ್ದ ಒಟ್ಟು 2,300 ರೂಪಾಯಿ ನಗದು ಹಾಗೂ ಒಂದು ಮೋಟರ್‌ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ: 87, 93 ಕೆ.ಪಿ.ಅಕ್ಟ್‌  & ಕಲಂ: 11(1)m(ii),11(1)(n) ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!