Wednesday, June 24, 2026
Homeಕರಾವಳಿಉಡುಪಿಉಡುಪಿಯ ಯುವಕ ಅನಾರೋಗ್ಯದಿಂದ ಅಸ್ಸಾಂನಲ್ಲಿ ನಿಧನ

ಉಡುಪಿಯ ಯುವಕ ಅನಾರೋಗ್ಯದಿಂದ ಅಸ್ಸಾಂನಲ್ಲಿ ನಿಧನ

- Advertisement -
- Advertisement -

 ಉಡುಪಿಯ ಯುವಕನೊಬ್ಬ ಅನಾರೋಗ್ಯದಿಂದ ಅಸ್ಸಾಂನಲ್ಲಿ ನಿಧನರಾಗಿರುವ ಘಟನೆ ನಡೆದಿದೆ. ಕಾಪು ತಾಲೂಕು ಕಟಪಾಡಿ ಸಮೀಪದ ಸರಕಾರಿಗುಡ್ಡೆ ನಿವಾಸಿ ಅಶೋಕ್ ಆಚಾರ್ಯ(33) ಮೃತ ಯುವಕ.

ಅಶೋಕ್ ಆಚಾರ್ಯ ಅಸ್ಸಾಂನ ಗುವಾಹಟಿಗೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಅಶೋಕ್ ಆಚಾರ್ಯ ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಅಸ್ವಸ್ಥತೆ ಉಂಟಾಗಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಯುವಕನ ಅಕಾಲಿಕ ನಿಧನ ಕುಟುಂಬಸ್ಥರಿಗೆ ಮತ್ತು ಆಪ್ತರಿಗೆ ಬಹುದೊಡ್ಡ ಆಘಾತವನ್ನು ಉಂಟು ಮಾಡಿದೆ.

- Advertisement -

Latest News

error: Content is protected !!