Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಶಬರಿಮಲೆಯಲ್ಲಿ ಹೃದಯಾಘಾತವಾಗಿ ಸುಧೀರ್ ತೆಕ್ಕಾರು ನಿಧನ

ಬೆಳ್ತಂಗಡಿ : ಶಬರಿಮಲೆಯಲ್ಲಿ ಹೃದಯಾಘಾತವಾಗಿ ಸುಧೀರ್ ತೆಕ್ಕಾರು ನಿಧನ

- Advertisement -
- Advertisement -

ಬೆಳ್ತಂಗಡಿ : ಶಬರಿಮಲೆ ಯಾತ್ರೆಗೆಂದು ತೆರಳಿದ್ದ ಸುಧೀರ್ ತೆಕ್ಕಾರು  (28) ಅವರು ಹೃದಯಾಘಾತವಾಗಿ ಶಬರಿಮಲೆಯಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖರಾಗಿದ್ದ ಸುಧೀರ್  ಅವರು ಫ್ರೆಂಡ್ಸ್ ತೆಕ್ಕಾರು ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಅಲ್ಲದೇ  ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಪ್ರೀತಿ ಸಂಪಾದಿಸಿದ್ದರು. ಅವರ ನಿಧನ ಅವರ ಆಪ್ತರಿಗೆ ಮಾತ್ರವಲ್ಲದೇ ಇಡೀ ಊರಿಗೇ ದೊಡ್ಡ ಆಘಾತವನ್ನು ಉಂಟು ಮಾಡಿದೆ.

- Advertisement -

Latest News

error: Content is protected !!