Friday, June 5, 2026
Homeಕರಾವಳಿಮಂಗಳೂರುಪುತ್ತೂರು; ಶಾಸಕ ಅಶೋಕ್ ರೈ ವಿರುದ್ಧ ಕ್ರಮಕ್ಕಾಗಿ ಬಿಜೆಪಿ ಪುತ್ತೂರು ಠಾಣೆಗೆ ದೂರು

ಪುತ್ತೂರು; ಶಾಸಕ ಅಶೋಕ್ ರೈ ವಿರುದ್ಧ ಕ್ರಮಕ್ಕಾಗಿ ಬಿಜೆಪಿ ಪುತ್ತೂರು ಠಾಣೆಗೆ ದೂರು

- Advertisement -
- Advertisement -

ಪುತ್ತೂರು; ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯನ್ನ ನಾಯಿಗೆ ಹೋಲಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈ ವಿರುದ್ದ ಕ್ರಮಕ್ಕಾಗಿ ಆಗ್ರಹಿಸಿ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದ ಬಿಜೆಪಿ ನಾಯಕರು ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ.


ಉಪ್ಪಿನಂಗಡಿಯಲ್ಲಿ VB-G-RAM-G ಪರವಾಗಿ ನಡೆದ ಬಿಜೆಪಿ ಪಾದಯಾತ್ರೆಯ ಸಭೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅಶೋಕ್ ರೈಯ ಸುಳ್ಳು ಯೋಜನೆಗಳನ್ನ ಅವರ ಬಟ್ಟೆ ಬಿಚ್ಚಿ ಜನರ ಮುಂದಿಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಶಾಸಕ ಅಶೋಕ್ ರೈ ಛಲವಾದಿಯನ್ನ ನಾರಾಯಣ ಸ್ವಾಮಿ ಅವರನ್ನು ನಾಯಿ ಎಂಬ ಪದ ಬಳಸಿ ತಿರುಗೇಟು ನೀಡಿದ್ದರು.


ಸದ್ಯ ಶಾಸಕ ಅಶೋಕ್ ರೈ ಹೇಳಿಕೆ ವಿರುದ್ದ ಬಿಜೆಪಿ ಕೆಂಡಾಮಂಡಲವಾಗಿದ್ದು, ಪ್ರತಿಪಕ್ಷ ನಾಯಕನನ್ನ ನಾಯಿ ಎಂದ ಅಶೋಕ್‌ ರೈ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಅತ್ಯಂತ ಕೀಳುಪದಗಳಲ್ಲಿ ಏಕವಚನದಲ್ಲಿ ನಿಂದಿಸಿದ ಅಶೋಕ್ ರೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಅಶೋಕ್ ರೈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶವ್ಯಕ್ತಪಡಿಸಿದ್ದು, ಕೂಡಲೇ ಅಶೋಕ್ ರೈ ಕ್ಷಮೆಯಾಚಿಸಲು ಬಿಜೆಪಿ ಪಟ್ಟು ಹಿಡಿದಿದೆ.

- Advertisement -

Latest News

error: Content is protected !!