Wednesday, June 3, 2026
Homeಪ್ರಮುಖ-ಸುದ್ದಿಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್..

- Advertisement -
- Advertisement -

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪಗೆ ಕೋವಿಡ್ – 19 ಪಾಸಿಟಿವ್ ಬಂದಿದ್ದು,ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಶಾಸಕ ಹರತಾಳು ಹಾಲಪ್ಪ ಫೇಸ್‌ ಬುಕ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. “ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದವರಿಗೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಬೇಕಾಗಿ ವಿನಂತಿಸುತ್ತೇನೆ” ಎಂದು ಮನವಿ ಮಾಡಿದ್ದಾರೆ.

ನಾನು ಕೋವಿಡ್-19 ಪರೀಕ್ಷೆ ಒಳಗಾಗಿದ್ದು ಇದೀಗ ಬಂದ ವರದಿಯ ಪ್ರಕಾರ ನನಗೆ, ನನ್ನ ಪತ್ನಿ, ಕಾರು ಚಾಲಕ, ಹಾಗೂ ಓರ್ವ ಸಿಬ್ಬಂದಿಗೆ, ಪಾಸಿಟಿವ್ ಎಂದು…

Posted by Harathalu Halappa on Tuesday, 4 August 2020

ಶಾಸಕ ಹರತಾಳು ಹಾಲಪ್ಪ ಮಾತ್ರವಲ್ಲ. ಶಾಸಕರ ಪತ್ನಿ, ಕಾರು ಚಾಲಕ ಮತ್ತು ಒಬ್ಬರು ಭದ್ರತಾ ಸಿಬ್ಬಂದಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಹರತಾಳು ಹಾಲಪ್ಪ ಅವರನ್ನು ಎಂಎಸ್‌ಐಎಲ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಜುಲೈ 30ರಂದು ಅವರು ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ ಮಾಡಿದ್ದರು.

- Advertisement -

Latest News

error: Content is protected !!