- Advertisement -
![]()
- Advertisement -
ಬೆಳ್ತಂಗಡಿ: ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇರ್ತಾರೆ ಅನ್ನೋ ಹಾಗೇ ಪೊಲೀಸರು ಅದೆಷ್ಟು ಜಾಗೃತಿ ಮೂಡಿಸಿದ್ರೂ ಕೆಲವರು ಅಪರಿಚಿತರನ್ನು ನಂಬೋದು ಮಾತ್ರ ಬಿಡಲ್ಲ. ಇದೀಗ ಖತರ್ನಾಕ್ ಕಳ್ಳನೊಬ್ಬನನ್ನು ನಂಬಿದ ಮಹಿಳೆಯರು ಚಿನ್ನದ ಸರ ಕಳೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ಮನೆಯೊಂದಕ್ಕೆ ಬಂದ ಖತರ್ನಾಕ್ ಕಳ್ಳ ಮಹಿಳೆಗೆ ಚಿನ್ನ ತೊಳೆದುಕೊಡುವುದಾಗಿ ಹೇಳಿದ್ದ. ಮಹಿಳೆಯು ಚಿನ್ನದ ಸರವನ್ನು ಆತನ ಕೈಯಲ್ಲಿ ನೀಡುತ್ತಿದ್ದಂತೆ, ಕಳ್ಳ ಓಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಹಿಳೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಗ್ರಾಮದ ಮತ್ತೊಂದು ಮನೆಗೆ ತೆರಳುವ ವಿಡಿಯೋವನ್ನು ಗ್ರಾಮಸ್ಥರು ವೈರಲ್ ಮಾಡಿ, ಈ ವ್ಯಕ್ತಿ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
- Advertisement -


