Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ನಂತೂರು ಸರ್ಕಲ್ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಸ್ಕೂಟರ್ ಸಹಸವಾರೆ ಮೃತಪಟ್ಟ ಪ್ರಕರಣ; ಪ್ರತಿಭಟನೆ...

ಮಂಗಳೂರು: ನಂತೂರು ಸರ್ಕಲ್ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಸ್ಕೂಟರ್ ಸಹಸವಾರೆ ಮೃತಪಟ್ಟ ಪ್ರಕರಣ; ಪ್ರತಿಭಟನೆ ಮಾಡಿದವರ ಮೇಲೆ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ನಂತೂರು ಸರ್ಕಲ್ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಸ್ಕೂಟರ್ ಸಹಸವಾರೆ ಮೃತಪಟ್ಟ ಪ್ರಕರಣಕ್ಕೆ  ಸಂಬಂಧಿಸಿದಂತೆ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆ ಎದುರು ಬಸ್ ಚಾಲಕನ ವಿರುದ್ದ ಕ್ರಮಕ್ಕೆ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.


1) ಅಮೀತ್, ವಿವೇಕನಗರ ಬಲ್ಲಾಳ್ ಭಾಗ್ 2) ಕೀರ್ತನ್ ,ವಿವೇಕನಗರ ಬಲ್ಲಾಳ್ ಭಾಗ್ 3) ನವೀತ್ ವಿವೇಕನಗರ , ಬಲ್ಲಾಳ್ ಭಾಗ್ 4) ಭರತ್ ರಾಜ್ ವಿವೇಕನಗರ ಬಲ್ಲಾಳ್ ಭಾಗ್ ,5) ಪವನ್, ವಿವೇಕನಗರ ಬಲ್ಲಾಳ್ ಭಾಗ್ 6) ಲೋಕೆಶ್ ,ಮಂಗಳಾದೇವಿ,7) ಮನ್ವೀತ್ ಬಲ್ಲಾಳ್ ಭಾಗ್ 8) ಅನೀಲ ಕುಮಾರ್ ಕಂಕನಾಡಿ ,9) ಪ್ರೇಮನಾಥ ಬಲ್ಲಾಳ್ ಭಾಗ್ ಮತ್ತು ಇತರ ಮೇಲೆ ಅಕ್ರಮಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.


ಫೆಬ್ರವರಿ 4 ರಂದು ಸಂಜೆ ನಂತೂರು ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ದೀಪ್ತಿ ಎಂಬ ಯುವತಿ ಸಾವನಪ್ಪಿದ್ದರು. ಬಳಿಕ ದಿನಾಂಕ:05-02-2026 ರಂದು ಮೃತ ದೀಪ್ತಿ ಮೃತದೇಹವನ್ನು ಆಂಬುಲೆನ್ಸ್ ನೊಂದಿಗೆ ಬಂದು ಕದ್ರಿ ಪೊಲೀಸ್ ಠಾಣೆಯ ಎದುರು ತಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಪಘಾತ ನಡೆಸಿದ ಖಾಸಗಿ ಬಸ್ ಚಾಲಕನ ವಿರುದ್ದ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದರು. ಈ ವೇಳೆ ಪ್ರತಿಭಟನೆ ಮಾಡುವುದು ಸರಿ ಅಲ್ಲವೆಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದರೂ ಈ ಬಗ್ಗೆ ಗಮನಹರಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಮತ್ತು ಈ ರೀತಿ ನಡೆಸಿದ ಪ್ರತಿಭಟನೆಯಿಂದ ಸದ್ರಿ ಪರಿಸರದಲ್ಲಿ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆಯಾಗಿರುತ್ತದೆ ಅಲ್ಲದೇ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!