Wednesday, October 14, 2026
Homeಕರಾವಳಿಮಂಗಳೂರುಮಂಗಳೂರು; ಸ್ಕೂಟರ್ ಗೆ ಸಿಟಿ ಬಸ್‌ ಡಿಕ್ಕಿ; ಹಿಂಬದಿ ಸವಾರೆ ಸಾವು

ಮಂಗಳೂರು; ಸ್ಕೂಟರ್ ಗೆ ಸಿಟಿ ಬಸ್‌ ಡಿಕ್ಕಿ; ಹಿಂಬದಿ ಸವಾರೆ ಸಾವು

- Advertisement -
- Advertisement -

ಮಂಗಳೂರು; ಸ್ಕೂಟರ್ ಗೆ ಸಿಟಿ ಬಸ್‌ ಡಿಕ್ಕಿಯಾಗಿ ಹಿಂಬದ ಸವಾರೆ ಸಾವನ್ನಪ್ಪಿರುವ ಘಟನೆ ಮಂಗಳೂರಿನ ನಂತೂರು ವೃತ್ತದ ಬಳಿ  ನಡೆದಿದೆ. ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಮೃತರು. ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ.

ಬಸ್ ಮತ್ತು ಸ್ಕೂಟರ್ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದವು. ನಂತೂರು ಬಸ್‌ ನಿಲ್ದಾಣದ ಬಳಿ ಸ್ಕೂಟರ್ ಗೆ ಬಸ್ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಬಸ್ ನಡಿ ಬಿದ್ದಿದೆ. ಈ ವೇಳೆ  ಸಹಸವಾರೆಯ ಮೇಲೆಯೆ ಬಸ್ ನ ಟಯರ್ ಹರಿದು ಹೋಗಿದೆ. ಪರಿಣಾಮ ದೀಪ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ .ಈ ಬಗ್ಗೆ  ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!