ಮಂಗಳೂರು : ಪೊಲೀಸ್ ಸಿಬ್ಬಂದಿಯ ಮನೆಗೇ ಕಳ್ಳ ಕನ್ನ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪೊಲೀಸ್ ಲೈನ್ ಎಒನ್ ಬ್ಲಾಕ್‌ನಲ್ಲಿರುವ ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಎಂಬವರು ರಜೆ ಮೇಲೆ ಊರಿಗೆ ತೆರಳಿದ್ದು ನೆರೆಹೊರೆಯವರು ಹೋದ ಕ್ಷಣದಲ್ಲಿ ಕಳ್ಳರು ಅವರ ಮನೆಯ ಬಾಗಿಲು ಹೊಡೆದು ಒಳ ನುಗ್ಗಿ ಅವರ ಮನೆಯ ಕಪಾಟನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದು , ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದುಕೊಂಡೊಗ್ಗಿದ್ದಾರೆ. ಈ ಬಗ್ಗೆ ದೂರುದಾರರಿಗೆ ಕರೆ ಮಾಡಿ ಪೋಲಿಸರು ಸ್ಥಳಕ್ಕೆ ಹೋಗಿ ನೋಡಿದ್ದು ಸ್ಥಳದಲ್ಲಿ ಯಾವುದೇ ತರಹದ ಹಾನಿ ಉಂಟಾಗಿದು ಕಂಡುಬಂದಿಲ್ಲ. ಸ್ಥಳದಲ್ಲಿ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ 1 ಮತ್ತು ಕ್ರೈಂ ಸಿಬ್ಬಂದಿ ಹಾಜರಿದ್ದು ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಪೋಲಿಸ್ ಲೈನ್‌ನ ಮೂರು ಗೇಟ್‌ಗಳು ತೆರೆದಿದ್ದು ಯಾವುದೇ ಬಿಗಿಯಾದ ಭದ್ರತೆ ಇಲ್ಲದ ಕಾರಣ ಕೇರಳ ರಾಜ್ಯದ ವ್ಯಕ್ತಿಗಳು ನಿರಂತರ ಬಂದು ಹೋಗುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.


