Tuesday, June 23, 2026
Homeಚಿಕ್ಕಮಗಳೂರುಅಡ್ಡ ಮತದಾನದ ಆತಂಕ ಹಿನ್ನೆಲೆ‌ ಧರ್ಮಸ್ಥಳ ತಲುಪಿದ‌ DCC ಬ್ಯಾಂಕ್ ಚುನಾವಣೆ: ಸಿ.ಟಿ ರವಿ ,SL...

ಅಡ್ಡ ಮತದಾನದ ಆತಂಕ ಹಿನ್ನೆಲೆ‌ ಧರ್ಮಸ್ಥಳ ತಲುಪಿದ‌ DCC ಬ್ಯಾಂಕ್ ಚುನಾವಣೆ: ಸಿ.ಟಿ ರವಿ ,SL ಭೋಜೇಗೌಡ ನೇತೃತ್ವದಲ್ಲಿ ಧರ್ಮಸ್ಥಳ ಯಾತ್ರೆ

- Advertisement -
- Advertisement -

ಧರ್ಮಸ್ಥಳ; DCC ಬ್ಯಾಂಕ್ ಚುನಾವಣೆ ವೇಳೆ ಅಡ್ಡ ಮತದಾನದ ಆತಂಕ ಹಿನ್ನೆಲೆ‌ ಸಿ.ಟಿ ರವಿ ಹಾಗೂ SL ಭೋಜೇಗೌಡ ನೇತೃತ್ವದಲ್ಲಿ ಧರ್ಮಸ್ಥಳ ಯಾತ್ರೆ ನಡೆದಿದೆ. ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಸಿ.ಟಿ ರವಿ, SL ಭೇಜೇಗೌಡ ,ನಿರಂಜನ್ ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಅಡ್ಡ ಮತದಾನವಾಗುವ ಆತಂಕ ಇರೋದರಿಂದ ಚಿಕ್ಕಮಗಳೂರಿನಲ್ಲಿ ಬಿಜೆಪಿ ,ಜೆಡಿಎಸ್ ಮೈತ್ರಿ ಪಕ್ಷದಿಂದ  ಧರ್ಮಸ್ಥಳ ಯಾತ್ರೆ ಕೈಗೊಳ್ಳಲಾಗಿದೆ.

32 ಮತದಾರಿರುವ ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದ ಚುನಾವಣೆಯಲ್ಲಿ ಸಿ.ಟಿ ರವಿ ,ಭೋಜೇಗೌಡ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಮಾಡಿದ್ದರು. ಆದರೆ ಬಿಜೆಪಿ ಕಾರ್ಯಕರ್ತ ನಿರಂಜನ್ ಸ್ಪರ್ಧೆ ಬೆನ್ನಲ್ಲೇ ಪೈಪೋಟಿ ಶುರುವಾಗಿದೆ. ಹೀಗಾಗಿ ಮತದಾರರೊಂದಿಗೆ ಸಿ.ಟಿ ರವಿ ,ಭೋಜೇಗೌಡ ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನ ಪಡೆದಿದ್ದಾರೆ. ನಿನ್ನೆ ಮಂಜುನಾಥನ‌ ದರ್ಶನ ಪಡೆದ ನಾಯಕರು ಇಂದು, ವೀರೇಂದ್ರ ಹೆಗಡೆಯವರ ಆಶೀರ್ವಾದ ಪಡೆದಿದ್ದಾರೆ

- Advertisement -

Latest News

error: Content is protected !!