Saturday, June 6, 2026
Homeಕರಾವಳಿಮಂಗಳೂರಿನಲ್ಲಿ ʼಸ್ಪೆಕ್ಟಮ್ – 2026ʼ ಒಂದು ದಿನದ ಹೃದ್ರೋಗ ಸಮ್ಮೇಳನ

ಮಂಗಳೂರಿನಲ್ಲಿ ʼಸ್ಪೆಕ್ಟಮ್ – 2026ʼ ಒಂದು ದಿನದ ಹೃದ್ರೋಗ ಸಮ್ಮೇಳನ

- Advertisement -
- Advertisement -

ಮಂಗಳೂರು: ಇಲ್ಲಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ’ಸ್ಪೆಕ್ಟಮ್’ ಒಂದು ದಿನದ ಹೃದ್ರೋಗ ಸಮ್ಮೇಳನವನ್ನ ಕೊಡಿಯಾಲ್‌ಬೈಲ್‌ನ ದಿ ಓಶಿಯನ್ ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಮ್ಮೇಳನಕ್ಕೆ ಗಣ್ಯರಿಂದ ಚಾಲನೆ ಸಿಕ್ಕಿದ್ದು, ಮುಖ್ಯ ಅತಿಥಿಗಳಾಗಿ ನವದೆಹಲಿಯ ಎನ್‌ಎಂಸಿ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಅಧ್ಯಕ್ಷರಾದ ಡಾ|ಎಂ.ಕೆ.ರಮೇಶ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಜೆ.ಶೆಟ್ಟಿ ಅವರು ವಹಿಸಿದ್ದರು.

ಈ ವೇಳೆಯಲ್ಲಿ ಡಾ ಎಂ.ಕೆ. ರಮೇಶ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನ ಅಧ್ಯಕ್ಷರಾದ ಡಾ| ಬಿ.ವಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಡಾ| ಪುರುಷೋತ್ತಮ, ಸಲಹೆಗಾರ ಡಾ| ಅಶೋಕ್ ಹೆಗಡೆ,ಡಾ| ಪ್ರಶಾಂತ್ ಮಾರ್ಲ, ಡಾ.ಅಮಿತಾ ಪಿ ಮಾರ್ಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!