Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಗೃಹಲಕ್ಷ್ಮಿ ನೋಂದಣಿ ವಿಶೇಷ ಶಿಬಿರ

ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಗೃಹಲಕ್ಷ್ಮಿ ನೋಂದಣಿ ವಿಶೇಷ ಶಿಬಿರ

- Advertisement -
- Advertisement -

ಬೆಳ್ತಂಗಡಿ; ದಿನಾಂಕ:13-01-2026ರಂದು, ಮಂಗಳವಾರ, ಪೂರ್ವಾಹ್ನ: 10.00ಗಂಟೆಯಿಂದ ಸಾಯಂಕಾಲ 4.00ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಛೇರಿಯ 1ನೇ ಮಹಡಿಯಲ್ಲಿ ಗೃಹಲಕ್ಷ್ಮಿ ನೋಂದಣಿ ವಿಶೇಷ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಐಟಿ ಮತ್ತು ಜಿ.ಎಸ್.ಟಿ ಹೊರತುಪಡಿಸಿ, ಅರ್ಜಿ ಸಲ್ಲಿಸಿ 5 ತಿಂಗಳು ಕಳೆದು (Processing ಎಂದು) ಗೃಹಲಕ್ಷ್ಮಿ ಯೋಜನೆಯ ಹಣವು ವೈಯುಕ್ತಿಕ ಖಾತೆಗೆ ಜಮೆಯಾಗದ ಫಲಾನುಭವಿಗಳು ಭಾಗವಹಿಸಬಹುದು. ಫಲಾನುಭವಿಗಳು ಅರ್ಜಿ ಸಲ್ಲಿಸಿದ ದಾಖಲೆ ಪ್ರತಿ, ಪಡಿತರ ಚೀಟಿ ತರುವುದು. ಅಲ್ಲದೇ, ಈವರೆಗೆ ಅರ್ಜಿ ಸಲ್ಲಿಸದಿರುವ ತಾಲೂಕಿನ ಅರ್ಹ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಪಡಿತರ ಚೀಟಿ ತಿದ್ದುಪಡಿ ಮಾಡಿಕೊಂಡ ಅರ್ಹ ಗೃಹಿಣಿಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಆಧಾರ್ ಪ್ರತಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ತರುವಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭವಾನಿಶಂಕರ್ ಎನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Latest News

error: Content is protected !!