Saturday, July 5, 2025
Homeಕರಾವಳಿಬೆಳ್ತಂಗಡಿ: ಅಯೋಧ್ಯೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಶಾಂತಿ ಸಭೆ

ಬೆಳ್ತಂಗಡಿ: ಅಯೋಧ್ಯೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಶಾಂತಿ ಸಭೆ

spot_img
- Advertisement -
- Advertisement -

ಬೆಳ್ತಂಗಡಿ: ದೇವಸ್ಥಾನ, ಭಜನಾ ಮಂದಿರಗಳಲ್ಲಿ ಭಜನೆ, ಪೂಜೆ ಸಲ್ಲಿಸಲು ಅವಕಾಶವಿದ್ದು, ಯಾವುದೇ ಸಂಭ್ರಮಾಚರಣೆ , ಮೆರವಣಿಗೆ ನಡೆಸಲು ಅವಕಾಶವಿಲ್ಲ. ಬೆಳ್ತಂಗಡಿ ತಾಲೂಕು ಸೌಹಾರ್ದತೆಯಿಂದ ಕೂಡಿದೆ , ಎಲ್ಲರೂ ಸಹೋದರರಂತೆ , ಒಮ್ಮತದಿಂದ ಬದುಕುವ ಮೂಲಕ ನಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಬೆಳ್ತಂಗಡಿ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ಎಂ.ಎಂ ಹೇಳಿದರು.

ಇವರು ಇಂದು ಆಗಸ್ಟ್ 5 ರ ಅಯೋಧ್ಯೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಕಾನೂನು ಬಾಹಿರವಾಗಿ ಯಾರೇ ವರ್ತಿಸಿದರೂ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ಭಾವನೆಗಳನ್ನು ಕೆರಳಿಸುವ ಬರಹಗಳನ್ನು ಯಾರೇ ಹಾಕಿದರೂ ಪ್ರತ್ಯುತ್ತರ ನೀಡದೆ ಪೋಲಿಸ್ ಇಲಾಖೆಯ ಗಮನಕ್ಕೆ ತಂದರೆ ಅಂತಹ ಕಿಡಿಗೇಡಿಗಳ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರೊಬೆಷನರಿ ಎಸ್ ಐ ಶರತ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಪೇದೆ ವೆಂಕಪ್ಪ ಸ್ವಾಗತಿಸಿ, ವಂದಿಸಿದರು.

.

- Advertisement -
spot_img

Latest News

error: Content is protected !!