Friday, June 5, 2026
Homeಕರಾವಳಿಬುರುಡೆ ಚಿನ್ನಯ್ಯ ಈಗ ಕೃಷಿ ಕೆಲಸಗಾರ; ಬುರುಡೆ ಪ್ರಕರಣದಲ್ಲಿ ಸಿಕ್ಕಿಬಿದ್ದವನ ಈಗಿನ ಪರಿಸ್ಥಿತಿಯನ್ನ ನೀವೇ ನೋಡಿ

ಬುರುಡೆ ಚಿನ್ನಯ್ಯ ಈಗ ಕೃಷಿ ಕೆಲಸಗಾರ; ಬುರುಡೆ ಪ್ರಕರಣದಲ್ಲಿ ಸಿಕ್ಕಿಬಿದ್ದವನ ಈಗಿನ ಪರಿಸ್ಥಿತಿಯನ್ನ ನೀವೇ ನೋಡಿ

- Advertisement -
- Advertisement -

ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ ಹೊರಬಂದ ಚಿನ್ನಯ್ಯ ಈಗ ಜೀವ ಭಯದಲ್ಲಿ ಗೌಪ್ಯವಾಗಿ ಕೃಷಿ ತೋಟದಲ್ಲಿ ಕೆಲಸಗಾರನಾಗಿದ್ದಾನೆ. ಈತ ಕೃಷಿ ತೋಟದಲ್ಲಿ ಕೆಲಸ ಮಾಡುವ ವಿಡಿಯೋ ಮಹಾಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.

ಬುರುಡೆ ಸೂತ್ರಧಾರಿಗಳ ಬಲೆಗೆ ಬಿದ್ದು ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಮಾಡಿ ನೇತ್ರಾವತಿ ಬಂಗ್ಲೆಗುಡ್ಡೆಯಲ್ಲಿ ವಿವಿಧ ಭಾಗಗಳಲ್ಲಿ ತಿಂಗಳ ಕಾಲ ಗುಂಡಿ ತೋಡಿಸಿ ಸರಕಾರಕ್ಕೆ 4 ಕೋಟಿಗೂ ಅಧಿಕ ಖರ್ಚು ಮಾಡಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕೊನೆಗೆ ಬುರುಡೆ ಚಿನ್ನಯ್ಯನಿಂದ ಎಸ್ಐಟಿ ಅಧಿಕಾರಿಗಳು ಸತ್ಯ ಕಕ್ಕಿಸಿ ಜೈಲಿಗಟ್ಟಿದ್ದರು.

ಈ ಪ್ರಕರಣದಲ್ಲಿ ಸುಮಾರು 4 ತಿಂಗಳು ಜೈಲು ಸೇರಿ ಹೊರಬಂದ ಚಿನ್ನಯ್ಯನಿಗೆ ಜಿಲ್ಲಾ ಕೋರ್ಟ್ 12 ಷರತ್ತುಗಳನ್ನು ಕೊಟ್ಟು ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ಸಹಿ ಹಾಕಲು ಆದೇಶ ಮಾಡಿತ್ತು. ಚಿನ್ನಯ್ಯನಿಗೆ ಜಾಮೀನು ಸಿಕ್ಕರೂ ಒಂದು ತಿಂಗಳು ಜೈಲಿನಲ್ಲಿದ್ದ ಬಳಿಕ ಪತ್ನಿ ಮಲ್ಲಿಕಾ ತನ್ನ ಊರಿನ ಮುಖಂಡರುಗಳ ಬಳಿ ಕಾಡಿಬೇಡಿ ಶೂರಿಟಿ ಸಿಗುವಂತೆ ಮಾಡಿಸಿ ಜೈಲಿನಿಂದ ಹೊರತಂದಿದ್ದಾರೆ.

ಈ ಪ್ರಕರಣದ ಬಳಿಕ ಚಿನ್ನಯ್ಯ ಮತ್ತು ಪತ್ನಿ ಮಲ್ಲಿಕಾ ಬೆಳ್ತಂಗಡಿ ತಾಲೂಕಿನ ಉಜಿರೆಯ ಪರಿಸರದ ಕೃಷಿಕರೊಬ್ಬರಿಗೆ ಸೇರಿದ ತೋಟದಲ್ಲಿ ಜೀವಭಯದ ಜೊತೆ ಗೌಪ್ಯವಾಗಿ ದಿನಕೂಲಿ ನೆಲೆಯಲ್ಲಿ ಕೆಲಸ ಮಾಡುತ್ತಾ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹೋಗಿ ಸಹಿ ಹಾಕಿ ವಾಪಸ್ ಬಂದು ಕೃಷಿ ತೋಟದಲ್ಲಿ ಕೆಲಸ ಮುಂದುವರಿಸುತ್ತಾನೆ. ಚಿನ್ನಯ್ಯ ಜೈಲಿನಿಂದ ಹೊರಬಂದ ಬಳಿಕ ಯಾರ ಜೊತೆ ಕೂಡ ಮಾತಾನಾಡುತ್ತಿಲ್ಲ. ಆತ ಕೆಲಸ ಮಾಡುತ್ತಾ ಪತ್ನಿ ಮಲ್ಲಿಕಾ ಜೊತೆ ಬಾಡಿಗೆ ಮನೆ ಪಡೆದುಕೊಂಡು ಜೀವನ ನಡೆಸುತ್ತಿದ್ದಾನೆ.

ಬುರುಡೆ ಷಡ್ಯಂತ್ರ ಮಾಡಿದ ಸೂತ್ರಧಾರಿಗಳು ಸೇರಿಕೊಂಡು ಚಿನ್ನಯ್ಯನನ್ನು ತಮ್ಮ ದಾಳಕ್ಕೆ ಬಳಸಿಕೊಂಡು ಜೈಲು ಸೇರಿದ ಬಳಿಕ ಜಾಮೀನು ನೀಡದೆ ನಡುನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ. ಒಟ್ಟಾರೆಯಾಗಿ ಹಣದ ಅಮಿಷಕ್ಕೆ ಒಳಗಾಗಿ ಚಿನ್ನಯ್ಯ ಇನ್ನೊಬ್ಬರು ಹೇಳಿಕೊಟ್ಟ ಮುರ್ಖ ಕೆಲಸಗಳನ್ನು ಮಾಡಿದ ತಪ್ಪಿಗೆ ಜೈಲಿಗೆ ಹೋಗಿಬಂದು ಈಗ ಸೈಲೆಂಟ್ ಆಗಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.

ಬುರುಡೆ ಚಿನ್ನಯ್ಯ ತೋಟದ ಕೆಲಸಗಳ Exclusive ವಿಡಿಯೋ ಮಹಾಎಕ್ಸ್ ಪ್ರೆಸ್ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಿದೆ.

- Advertisement -

Latest News

error: Content is protected !!