Wednesday, June 3, 2026
Homeತಾಜಾ ಸುದ್ದಿಹಸ್ತಲಾಘವ ಮಾಡುವ ಭರದಲ್ಲಿ ಸಿಎಂ ಕೈ ಹಿಡಿದೆಳೆದ ಅಭಿಮಾನಿ

ಹಸ್ತಲಾಘವ ಮಾಡುವ ಭರದಲ್ಲಿ ಸಿಎಂ ಕೈ ಹಿಡಿದೆಳೆದ ಅಭಿಮಾನಿ

- Advertisement -
- Advertisement -

ಮೈಸೂರು: ಹಸ್ತಲಾಘವ ಮಾಡುವ ಭರದಲ್ಲಿ ಅಭಿಮಾನಿಯೋರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈ ಹಿಡಿದು ಎಳೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಖಾಸಗಿ ನಿವಾಸದ ಬಳಿ ಈ ಘಟನೆ ನಡೆದಿದೆ. ಕೈ ಹಿಡಿದು ಎಳೆದ ರಭಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ‌ಒಂದು‌‌ ಕ್ಷಣ ಮುಗ್ಗರಿಸಿದಂತಾಗಿದ್ದಾರೆ.

ತಕ್ಷಣ ಜೊತೆಯಲ್ಲಿದ್ದ ಅಂಗರಕ್ಷಕರು ಮುಗ್ಗರಿಸುತ್ತಿದ್ದ ಸಿದ್ಧರಾಮಯ್ಯ ಅವರನ್ನು ಹಿಡಿದುಕೊಂಡಿದ್ದು ಬೀಳದಂತೆ ತಡೆದಿದ್ದಾರೆ.

ಮೈಸೂರು ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಇಂದು ಸಾರ್ವಜನಿಕರನ್ನು ಭೇಟಿ ಮಾಡಲು ಮನೆಯಿಂದ ಹೊರ ಬಂದ ವೇಳೆ ಅಭಿಮಾನಿಯೋರ್ವ ಹಸ್ತಲಾಘವ ಮಾಡಲು ಮುಂದಾಗಿದ್ದರು.

- Advertisement -

Latest News

error: Content is protected !!