Thursday, June 25, 2026
Homeಕರಾವಳಿಮಂಗಳೂರುಮಂಗಳೂರು; ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ಪ್ರಕರಣ; ಘಟನೆಗೆ ಸಂಬಂಧಪಟ್ಟಂತೆ ಪ್ರತ್ಯೇಕವಾಗಿ...

ಮಂಗಳೂರು; ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ಪ್ರಕರಣ; ಘಟನೆಗೆ ಸಂಬಂಧಪಟ್ಟಂತೆ ಪ್ರತ್ಯೇಕವಾಗಿ ಎರಡು ಕೇಸ್ ದಾಖಲು   

- Advertisement -
- Advertisement -
ಮಂಗಳೂರು;ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27-12-2025 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಮತ್ತು ಅಬ್ದುಲ್ ಸತ್ತಾರ್ ರವರನ್ನು ಸುಮೀತ್ ಮತ್ತು ಎಮ್ ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ  ಮಾಡಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿ ತಖೆಯಲ್ಲಿರುತ್ತವೆ.

ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ INSTAGRAM ನಲ್ಲಿ muslim__leader ಎಂಬ ಇನಸ್ಟಾಗ್ರಾಮ ಪೇಜ್ ನಲ್ಲಿ ಇಬ್ಬರು ಯುವಕರ ಪೋಟೋವನ್ನು ಹಾಕಿ “ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಇದಕ್ಕೆ ಕಡಿವಾಣ ಇಲ್ಲವಾಯಿತೆ?, ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ ಕಾನೂನು ಅವರನ್ನು ಏನು ಮಾಡುವುದಿಲ್ಲ ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ ನಾವು ಆಡಿದ್ದೇ ಆಟ ಎಂಬಾತಾಗಿದೆ. ಇನ್ನು ಗೋಮಾಂಸ ತಿನ್ನುತ್ತೇವೆ ಸಂಘಿಗಳೇ ಏನು ಮಾಡುತ್ತೀರ ಥೂ ನಿಮ್ಮ ಜನ್ಮಕ್ಕೆ ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗಂಜಿಮಠ ವ್ಯಾಪ್ತಿಯ ನಾರ್ಳಪದವು ಎಂಬಲ್ಲಿ ಒಡ್ಡೂರಿನ ಪ್ರದೀಪ್, ರಜಿತ್, ಸಂತೋಷ್, ಹಾಗೂ ಜನಾರ್ಧನ ಎಂಬ ಸಂಘಿ ಗೂಂಡಾಗಳಿಂದ ಮೂಲ್ಲರಪಟ್ಟಣದ ಅಮಾಯಕ ಮುಸ್ಲಿಂ ತಂದೆ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ”  Muslim- Leader ಎಂದು ಟೈಪು ಮಾಡಿ ಪೋಸ್ಟ್ ಮಾಡಿರುವುದು ಅಲ್ಲದೆ instg4ama ಎಂಬ ಇನಸ್ಟಾಗ್ರಾಮ ID ಯಿಂದ ಸದ್ರಿ ಪೋಸ್ಟ್ ಗೆ “ ಇವರಿಗೆ ಸುಹಾಸ್ ಶಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೋಸ್ಟ್ ಮಾಡಿರುವ ಹಾಗೂ ಸದ್ರಿ ಪೋಸ್ಟ್ ಗೆ ಸುಹಾಸ್ ಶೆಟ್ಟಿ ರವರನ್ನು ಕೊಂದ ರೀತಿಯಲ್ಲಿ ಸದ್ಯದಲ್ಲಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಕಮೆಂಟ್ ಮಾಡಿರುವರರ ವಿರುದ್ದ ಬಜಪೆ ಪೊಲೀಸರು ಮೊ.ನಂ 07/2026 ಕಲಂ 351(2), 351( 3), 352, 353(2),192 BNS-2023 ರಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿರುತ್ತಾರೆ. ಶೀಘ್ರದಲ್ಲೇ ಆರೋಪಿತರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



- Advertisement -

Latest News

error: Content is protected !!