ಮೂಡಬಿದರೆ: ಕಡಂದಲೆ ಚಂದ್ರಶೇಖರ ದೇವಾಡಿಗ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ;
ದಿನಾಂಕ: 27-12-2025 ರಂದು ಚಂದ್ರಶೇಖರ ದೇವಾಡಿಗ ಅವರು ಗಲಾಟೆಯ ಬಗ್ಗೆ ರಾಜಿ ಪಂಚಾಯತಿ ಮಾಡಲು ಕಡಂದಲೆಯ ಪರಾರಿ ಎಂಬಲ್ಲಿರುವ ಸಂತೋಷ ಶೆಟ್ಟಿ ಎಂಬುವರ ಮನೆಗೆ ಹೋಗಿದ್ದಾರೆ. ಈ ವೇಳೆ ರಾಜಿ ಪಂಚಾಯಿತಿಕೆ ನಡೆಯುತ್ತಿರುವಾಗ ಚಂದ್ರಶೇಖರ್ ಅವರನ್ನು ತುಳುವಿನಲ್ಲಿ ಅವಾಚ್ಯವಾಗಿ ನಿಂದಿಸಿ ಕೈಯಿಂದ ಕೆನ್ನೆಗೆ ಹೊಡೆದಿದ್ದು, ಸಮಯ ಅವರ ಜೊತೆಯಲ್ಲಿದ್ದ ಶ್ರೀನಾಥ್ ಹಾಗೂ ಇತರೆ 3 ಜನರು ಚಂದ್ರಶೇಖರ್ ಅವರನ್ನು ಕೊಲ್ಲುವ ಉದ್ದೇಶದಿಂದ ಎದೆಗೆ, ಎಡ ಕೈಗೆ, ಭುಜಕ್ಕೆ ಹೊಡೆದು, ಗೋಡೆಗೆ ತಳ್ಳಿ, ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೊಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಆ ಸಮಯ ಅಲ್ಲಿದ್ದ ಚಂದ್ರಶೇಖರ್ ಅವರ ಅಣ್ಣ, ಸುಚರಿತ ಶೆಟ್ಟಿ, ಸಂತೋಷ ಶೆಟ್ಟಿ ರವರು ಬಿಡಿಸಲು ಬಂದಾಗ ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ ಶ್ರೀಕಾಂತ ಶೆಟ್ಟಿ, ಹಾರ್ದಿಕ ಶೆಟ್ಟಿ, ಶ್ರೀನಾಥ ಮತ್ತು ಇತರ 3 ಜನರು ಚಂದ್ರಶೇಖರ್ ಅವರನ್ನು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ. ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೋಗಿರುತ್ತಾರೆ.
ಈ ಬಗ್ಗೆ ಚಂದ್ರಶೇಖರ್ ಅವರು ಮೂಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


