Friday, June 5, 2026
Homeಕರಾವಳಿಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ 2025ನೇ ಸಾಲಿನ ಹೊನಲು-ಬೆಳಕಿನ ಕ್ರೀಡೋತ್ಸವ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ 2025ನೇ ಸಾಲಿನ ಹೊನಲು-ಬೆಳಕಿನ ಕ್ರೀಡೋತ್ಸವ

- Advertisement -
- Advertisement -

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ 2025ನೇ ಸಾಲಿನ ಹೊನಲು-ಬೆಳಕಿನ ಕ್ರೀಡೋತ್ಸವವು ಡಿ.21ರಂದು ಸಂಜೆ 6ರಿಂದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳ ಹಲವು ಬಗೆಯ ಸಾಹಸಮಯ ಪ್ರದರ್ಶನಗಳೊಂದಿಗೆ ನಡೆಯಲಿದೆ. ಪ್ರತಿವರ್ವುಈ ಕ್ರೀಡಾಕೂಟ ನಡೆಯುತ್ತಿದ್ದು,ಈ ಬಾರಿ ಸುಮಾರು 4 ಸಾವಿರದಷ್ಟು ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೈಸೂರು ಸಂಸದ ಯದುವೀರ ಕೃಷ್ಣದತ್ತ ಒಡೆಯರ್, ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ, ಸೀಮಾ ಬಿ.ಆರ್.ಶೆಟ್ಟಿ, ಡಾ.ವಿಜಯ ಜಿ.ಕಲಾಂತ್ರಿ, ಮನೋಜ್ ಸಿಂಗ್, ಉಮೇಶ್ ರಘುವಂಶಿ, ರವಿಕಾಂತ್, ಸಂಪತ್ ಶೆಟ್ಟಿ, ಡಾ.ಶಿಶಿರ್ ಶೆಟ್ಟಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿದ್ಯಾರ್ಥಿ ವೃಂದವು ಶಿಶು ನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ಟಿಕ್ ಟಿಕ್ ಪ್ರದರ್ಶನ, ಚೆಂಡೆ, ನೃತ್ಯ ವೈವಿಧ್ಯ, ಬೆಂಕಿ ಸಾಹಸ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ ಮೊದಲಾದ ಸಾಹಸಮಯ ಪ್ರದರ್ಶನಗಳನ್ನು ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!