- Advertisement -
![]()
- Advertisement -
ಈಚರ್ ಲಾರಿಗೆ ಇನ್ನೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಈಚರ್ ಲಾರಿ ಹೆದ್ದಾರಿ ಬದಿಯ ಅಂಗಡಿಗೆ ನುಗ್ಗಿದ ಘಟನೆ ನೆಲ್ಯಾಡಿಯಲ್ಲಿ ಬುಧವಾರದಂದು ಸಾಯಂಕಾಲ ಸಂಭವಿಸಿದೆ.
ನೆಲ್ಯಾಡಿಯಲ್ಲಿ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಈ ಕಾರಣದಿಂದ ಸರ್ವೀಸ್ ರಸ್ತೆ ಬಳಕೆಯಲ್ಲಿದ್ದು, ಈಚರ್ ಲಾರಿಯಿಂದ ಸರಕುಗಳನ್ನು ಇಳಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಲಾರಿಯು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಇದರ ಪರಿಣಾಮವಾಗಿ ಈಚರ್ ಲಾರಿಯು ಅಂಗಡಿಗೆ ನುಗ್ಗಿದ್ದು, ಅಂಗಡಿ ಮತ್ತು ಲಾರಿಗೆ ಹಾನಿಯಾಗಿದ್ದು, ಸಂಚಾರಕ್ಕೆ ತಡೆಯುಂಟಾಗಿತ್ತು.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಾಹನಗಳನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.
- Advertisement -


