Thursday, June 4, 2026
Homeಕರಾವಳಿಉಡುಪಿಉಡುಪಿ: ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ಅನ್ನು ನೀರು ಎಂದು ಕುಡಿದು ಯುವಕ ಸಾ*ವು

ಉಡುಪಿ: ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ಅನ್ನು ನೀರು ಎಂದು ಕುಡಿದು ಯುವಕ ಸಾ*ವು

- Advertisement -
- Advertisement -

ಉಡುಪಿ: ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ಅನ್ನು ನೀರು ಎಂದು ಕುಡಿದು ಯುವಕ ಸಾ*ವನ್ನಪ್ಪಿರುವ ಘಟನೆ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಕಿರಣ್ (17) ಮೃತ ಯುವಕ.

ಕಿರಣ್ ಅವರು ಅವರ ಮಾವ ಕೆಲಸ ಮಾಡುವ ಸ್ಥಳವಾದ ಪಾದೆಬೆಟ್ಟು ಎಂಬಲ್ಲಿಗೆ ದಿನಾಂಕ 09/12/2025 ರಂದು ಹೋಗಿದ್ದರು. ಈ ವೇಳೆ ಮಧ್ಯಾಹ್ನ 3:30 ಗಂಟೆಗೆ ವೇಳೆಗೆ ಕೆಲಸದವರು ಟೈಲ್ಸ್ ಕ್ಲೀನಿಂಗ್ ಗಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!