Wednesday, June 24, 2026
Homeಕರಾವಳಿಉಡುಪಿಉಡುಪಿ;  ಹಾವು ಕಡಿತಕ್ಕೊಳಗಾಗಿ ವೃದ್ಧೆ ಸಾ*ವು

ಉಡುಪಿ;  ಹಾವು ಕಡಿತಕ್ಕೊಳಗಾಗಿ ವೃದ್ಧೆ ಸಾ*ವು

- Advertisement -
- Advertisement -

ಉಡುಪಿ;  ಹಾವು ಕಡಿತಕ್ಕೊಳಗಾಗಿ ವೃದ್ಧೆ ಸಾವನ್ನಪ್ಪಿರುವ ಘಟನೆ ಮಡಾಮಕ್ಕಿ ಗ್ರಾಮದ ಮಾಂಡಿಮೂರಕೈ ಬಳಿ ನಡೆದಿದೆ.ಮಾಂಡಿಮೂರಕೈ ನಿವಾಸಿ ಜಲಜಾಕ್ಷಿ ಶೆಡ್ತಿ(76) ಮೃತರು.

ಜಲಜಾಕ್ಷಿ ಅವರು ಮನೆಯಲ್ಲಿ ತಲೆಕೂದಲಿಗೆ ಹಾಕುವ ಚೌರಿ ತೆಗೆಯಲು ಚೀಲಕ್ಕೆ ಕೈ ಹಾಕಿದಾಗ ಚೀಲದೊಳಗಿದ್ದ ವಿಷದ ಹಾವು ಬಲಗೈಯ ಬೆರಳಿಗೆ ಕಚ್ಚಿದೆ ಎಂದು ಹೇಳಲಾಗಿದೆ.ಘಟನೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!