- Advertisement -
![]()
- Advertisement -
ವಿಟ್ಲ: ತೆಂಗಿನ ಕಾಯಿ ತೆಗೆಯುವಾಗ ಅಲ್ಯೂಮಿನಿಯಂ ಕೊಕ್ಕೆಗೆ ವಿದ್ಯುತ್ ತಂತಿಗೆ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕರೋಪಾಡಿ ಗ್ರಾಮದ ಪದ್ಯಾಣ ಗಡಿಜಾಗೆ ಎಂಬಲ್ಲಿ ನಡೆದಿದೆ ಕರೋಪಾಡಿ ಗ್ರಾಮದ ನಾರಾಯಣ ನಾಯ್ಕ (45)ಮೃತರು.
ನಾರಾಯಣ ನಾಯ್ಕ್ ಅವರು ಡಿ.7ರಂದು ಬೆಳಿಗ್ಗೆ ಕರೋಪಾಡಿ ಗ್ರಾಮದ ಪದ್ಯಾಣ ಗಡಿಜಾಗೆ ಎಂಬಲ್ಲಿರುವ ಮನೆಯ ಎದುರುಗಡೆ ತೆಂಗಿನ ಮರದಿಂದ ಅಲ್ಯೂಮಿನಿಯಂ ಕೊಕ್ಕೆಯಿಂದ ತೆಂಗಿನಕಾಯಿ ತೆಗೆಯುವಾಗ ಆಕಸ್ಮಿಕವಾಗಿ ಕೊಕ್ಕೆ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದಿದೆ.ಪರಿಣಾಮ ಬಿದ್ದ ಅವರನ್ನು ಕೂಡಲೇ ತಮ್ಮ ಗಣೇಶ್ ಅವರು ರಿಕ್ಷಾದಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆವೇಳೆಗಾಗಲೇ ನಾರಾಯಣ ಅವರು ಮೃತಪಟ್ಟಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


