- Advertisement -


- Advertisement -
ಸುಳ್ಯ: ಅಂತರ್ ಜಿಲ್ಲಾ ಮಟ್ಟದ ದಾಸ ಸಂಕೀರ್ತನ ಕುಣಿತ ಭಜನಾ ಸ್ಪರ್ಧೆ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಜ್ಜಾವರ ವಲಯ, ತತ್ವಮಸಿ ಗ್ರೂಪ್ ಮಂಡೆಕೋಲು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮಂಡೆಕೋಲು ಇವುಗಳ ಸಹಕಾರದೊಂದಿಗೆ ನಡೆಯಿತು.
ಭಜನಾ ಕಾರ್ಯಕ್ರಮದಲ್ಲಿ ಕುಂಟಾರು ರವೀಶ ತಂತ್ರಿಗಳು ಆಶೀರ್ವಚನ ನೀಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ದಾಸ ಸಂಕೀರ್ತನೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂಘಟಕರು ಉಪಸ್ಥಿತರಿದ್ದರು. ನಂತರ ಕುಣಿತ ಭಜನಾ ಭಜನೆ ಸ್ಪರ್ಧೆ ನಡೆಯಿತು.
- Advertisement -


