Thursday, June 4, 2026
Homeಕರಾವಳಿಮಂಗಳೂರುಕಡಬ: ತಡ ರಾತ್ರಿ ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ಮಾಡಿದ ಆರೋಪ; ಕಡಬ ಠಾಣೆಯ...

ಕಡಬ: ತಡ ರಾತ್ರಿ ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ಮಾಡಿದ ಆರೋಪ; ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಅಮಾನತು

- Advertisement -
- Advertisement -

ಕಡಬ: ತಡ ರಾತ್ರಿ ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಕಡಬ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕಡಬ ಠಾಣೆಯ ಹೆಚ್. ಸಿ ರಾಜು ನಾಯ್ಕ್ ಅಮಾನತುಗೊಂಡ ಸಿಬ್ಬಂದಿ.

ಪ್ರಕರಣದ ವಿವರ;

ಕೊಯಿಲ ಗ್ರಾಮದ ನಿವಾಸಿ ಬಾಬು ಗೌಡ ಡಿ.3 ರಂದು ಎಂಬವರ ದೂರಿನಂತೆ ತಡರಾತ್ರಿ ವೇಳೆ ಮನೆಯ ಸಮೀಪದ ಸಹೋದರನ ಮನೆಯಲ್ಲಿ ಜೋರಾಗಿ ಶಬ್ದ ಕೇಳಿದೆ. ನೋಡಿದಾಗ ಅಕ್ರಮವಾಗಿ ಪ್ರವೇಶಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನು ಮನೆಯ ಸದಸ್ಯರುಗಳು ಹಿಡಿದುಕೊಂಡಿದ್ದು, ಅಪರಿಚಿತನು ತಪ್ಪಿಸಿಕೊಳ್ಳುವ ಉದ್ದೇಶದಿಂದ, ಮನೆಯ ಸದಸ್ಯರ ಪೈಕಿ ಚೇತನ್ ಎಂಬಾತನಿಗೆ ಮೇಲೆ ಕೈಯಿಂದ ಹಲ್ಲೆ ಮಾಡಿರುತ್ತಾನೆ ಎಂದು ಆರೋಪಿಸಲಾಗಿದೆ.ಆತನನ್ನು ಉಳಿದವರ ಸಹಾಯದಿಂದ ಹಿಡಿದು ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯು ಕಡಬ ಪೊಲೀಸ್ ಠಾಣೆಯ ಹೆಚ್.ಸಿ ರಾಜು ನಾಯ್ಕ ಎಂಬುದಾಗಿ ತಿಳಿದು ಬಂದಿರುತ್ತದೆ. ತಡರಾತ್ರಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಸದಸ್ಯರಿಗೆ ಕೈಯಿಂದ ಹಲ್ಲೆ ನಡೆಸಿದ ಬಗ್ಗೆ ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ 86/2025. ಕಲಂ: ಕಲಂ-329(3), 115(2), 331(6) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹೆಚ್.ಸಿ ರಾಜು ನಾಯ್ಕ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ತಕ್ಷಣ ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿರುತ್ತದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!