Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳಿಂದ ಹಿಂಬಾಲಿಸಿ ಮನೆಗೆ ಬರುವಂತೆ ಪೀಡಿಸುತ್ತಿದ್ದ ಆರೋಪಿ ಅಂದರ್

ಉಪ್ಪಿನಂಗಡಿ; ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳಿಂದ ಹಿಂಬಾಲಿಸಿ ಮನೆಗೆ ಬರುವಂತೆ ಪೀಡಿಸುತ್ತಿದ್ದ ಆರೋಪಿ ಅಂದರ್

- Advertisement -
- Advertisement -

ಉಪ್ಪಿನಂಗಡಿ; ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳಿಂದ ಹಿಂಬಾಲಿಸಿ ಮನೆಗೆ ಬರುವಂತೆ ಪೀಡಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್‌ ಮುಸ್ತಫಾ (40) ಬಂಧಿತ ಆರೋಪಿ.

ಆರೋಪಿ ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿ ಬಾಲಕಿ ಕಾಣಿಸಿಕೊಂಡಾಗಲೆಲ್ಲಾ ಆಕೆಯನ್ನು ಹಿಂಬಾಲಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಕಳೆದ ನ.29 ರಂದು ರಸ್ತೆ ಮಧ್ಯೆಯೇ ಬಾಲಕಿಗೆ ನೀನು ನನ್ನ ಮನೆಗೆ ಬಾ ಎಂದು ಪೀಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯ ಕಾಟದಿಂದ ಬೇಸತ್ತ ಬಾಲಕಿ ಈ ವಿಷಯವನ್ನು ತನ್ನ ಮನೆಯಲ್ಲಿ ಹೇಳಿದ್ದಾಳೆ. ಕೂಡಲೇ ಬಾಲಕಿಯ ಸಹೋದರ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಅಲರ್ಟ್‌ ಆದ ಉಪ್ಪಿನಂಗಡಿ ಪೊಲೀಸರು ಆರೋಪಿ ಮುಸ್ತಫಾನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ

- Advertisement -

Latest News

error: Content is protected !!