Sunday, June 7, 2026
Homeಕರಾವಳಿಉಡುಪಿಉಡುಪಿ : ಉಪ್ಪುಂದದಲ್ಲಿ ಮೀನುಗಾರರ ಬಲೆಗೆ ಸುಮಾರು 350 ಕೆ.ಜಿ. ತೂಕದ ಬೃಹತ್ ಗಾತ್ರದ ಮಡಲು...

ಉಡುಪಿ : ಉಪ್ಪುಂದದಲ್ಲಿ ಮೀನುಗಾರರ ಬಲೆಗೆ ಸುಮಾರು 350 ಕೆ.ಜಿ. ತೂಕದ ಬೃಹತ್ ಗಾತ್ರದ ಮಡಲು ಮೀನು

- Advertisement -
- Advertisement -

ಉಡುಪಿ : ‌ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಮೀನುಗಾರರ ಬಲೆಗೆ ಸುಮಾರು 350 ಕೆ.ಜಿ. ತೂಕದ ಬೃಹತ್ ಗಾತ್ರದ ಮಡಲು ಮೀನು ಬಿದ್ದಿದೆ.

ಗಿಲ್‌ನೆಟ್ ಮೀನುಗಾರರ ಬಲೆಗೆ ಬಿದ್ದ ಈ ಮೀನನ್ನು ಮಲ್ಪೆ ಬಂದರಿಗೆ ತರಲಾಯಿತು. ಸುಮಾರು 13 ಅಡಿ ಉದ್ದದ ಈ ಮೀನು 350 ಕೆಜಿ ತೂಕವನ್ನು ಹೊಂದಿದೆ.

ಇದನ್ನು ಕೆ.ಜಿ.ಗೆ 70ರೂ.ನಂತೆ ಕೇರಳದ ಮೀನು ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು. ಸ್ಥಳೀಯವಾಗಿ ಮಡಲು ಎಂದು ಮತ್ತು ಕೇರಳದಲ್ಲಿ ಕಟ್ಟಕಂಬ ಎಂದು ಈ ದೈತ್ಯ ಮೀನನ್ನು ಕರೆಯಲಾಗುತ್ತದೆ. ಮಲೆನಾಡು ಪ್ರದೇಶ ಮತ್ತು ಕೇರಳದಲ್ಲಿ ಈ ಜಾತಿಯ ಮೀನಿಗೆ ಹೆಚ್ಚಿನ ಬೇಡಿಕೆ ಇದೆ.

- Advertisement -

Latest News

error: Content is protected !!