Wednesday, June 3, 2026
HomeUncategorizedವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳ; ಚಿನ್ನಾಭರಣ ಹಾಗೂ ನಗದು ಕಳವು

ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳ; ಚಿನ್ನಾಭರಣ ಹಾಗೂ ನಗದು ಕಳವು

- Advertisement -
- Advertisement -

ಬಂಟ್ವಾಳ: ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ಸಜೀಪನಡು ಗ್ರಾಮದ ದೇರಾಜೆಯಲ್ಲಿ ನಡೆದಿದೆ.

ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆಗೆ ಕಳ್ಳ ನುಗಿದ್ದ ಎನ್ನಲಾಗಿದೆ.

ಮನೆಯಲ್ಲಿ ಸರೋಜಿನಿ ಎನ್ನುವ ಮಹಿಳೆಯನ್ನು ನಿಲ್ಲಿಸಿ ಮನೆಮಂದಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಧ್ಯಾಹ್ನ 2-3 ರ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ದೀಕ್ಷಿತ್ ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು.ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದಾನೆ ಎಂದು ಹೇಳಲಾಗಿದ್ದು, ಪ್ರಕರಣದ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!