Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾದ ಅಖಿಲೇಶ್ ಮನೆಗೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ

ಮಂಗಳೂರು; ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾದ ಅಖಿಲೇಶ್ ಮನೆಗೆ ಶಾಸಕ ಡಾ. ಭರತ್ ಶೆಟ್ಟಿ ಭೇಟಿ

- Advertisement -
- Advertisement -

ಮಂಗಳೂರು; ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾದ ಅಖಿಲೇಶ್ ಮನೆಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಸೋಮವಾರ ಹಾಡಹಗಲೇ ಮಂಗಳೂರು ಹೊರವಲಯದ ಬಜಪೆ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಸಂಚರಿಸಿಸುತ್ತಿದ್ದ ಅಮಾಯಕ ಅಖಿಲೇಶ್  ಅವರ ಮೇಲೆ ವಿನಾಕಾರಣ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದರು. ಗಾಯಗೊಂಡ ಅಖಿಲೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪೂಪಾಡಿಕಲ್ಲಿನಲ್ಲಿರುವ ಅಖಿಲೇಶ್ ಅವರ ಮನೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಖಿಲೆಶ್ ಅವರ ಮೇಲೆ ತಲವಾರು ದಾಳಿ ನಡೆಸಿದ್ದ ಆರೋಪಿಗಳಾದ ಸಿನಾನ್, ಇರ್ಷಾದ್, ಸುಹೈಲ್ ಹಾಗೂ ನಿಸಾನ್ ಇದೀಗ ಪೊಲೀಸ್ ವಶದಲ್ಲಿದ್ದಾರೆ.

- Advertisement -

Latest News

error: Content is protected !!