Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ರೆಖ್ಯ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಮನೆ

ಬೆಳ್ತಂಗಡಿ : ರೆಖ್ಯ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಮನೆ

- Advertisement -
- Advertisement -

ಬೆಳ್ತಂಗಡಿ : ರೆಖ್ಯ ಗ್ರಾಮದ ಕೊಲಾರು ನಿವಾಸಿ ಬಾಲಕೃಷ್ಣ ರವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನ. 13ರಂದು ಮುಂಜಾನೆ ನಡೆದಿದೆ.

ಮನೆ ಮಂದಿ ಕೆಲಸಕ್ಕೆ ಹೋದ ಕಾರಣ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ 45,000 ಹಣ, ಒಡವೆ, ಮಕ್ಕಳ ಪುಸ್ತಕ , ಬಟ್ಟೆ ಬರೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಮನೆಯವರು ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಜನಾರ್ಧನ್ ರೆಖ್ಯ, ಮತ್ತು ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ

- Advertisement -

Latest News

error: Content is protected !!