Saturday, June 6, 2026
HomeUncategorizedಬಂಟ್ವಾಳ: ಅತ್ತೆ ಮನೆಯಲ್ಲಿ ವಾಸವಿದ್ದ ಮುಂಬಯಿ ಮೂಲದ ಯುವತಿ ನಾಪತ್ತೆ

ಬಂಟ್ವಾಳ: ಅತ್ತೆ ಮನೆಯಲ್ಲಿ ವಾಸವಿದ್ದ ಮುಂಬಯಿ ಮೂಲದ ಯುವತಿ ನಾಪತ್ತೆ

- Advertisement -
- Advertisement -

ಬಂಟ್ವಾಳ: ಅತ್ತೆ ಮನೆಯಲ್ಲಿ ವಾಸವಿದ್ದ ಮುಂಬಯಿ ಮೂಲದ ಯುವತಿ ನಾಪತ್ತೆಯಾಗಿರುವ ಘಟನೆ ಬೆಂಜನಪದವು ಶಿವಾಜಿನಗರದಲ್ಲಿ ನಡೆದಿದೆ. ಬೆಂಜನಪದವು ಶಿವಾಜಿನಗರದಲ್ಲಿ ವಾಸವಿದ್ದ ಮರಿಯಾ ಆಲ್ಬರ್ಟ್ ಡಿ’ಸೋಜಾ ನಾಪತ್ತೆಯಾಗಿರುವ ಯುವತಿ.

ಮರಿಯಾ ಆಲ್ಬರ್ಟ್ ಡಿ’ಸೋಜಾ ಕುಟುಂಬ ಮುಂಬಯಿಯಲ್ಲಿ ನೆಲೆಸಿದ್ದು 1 ವರ್ಷದ ಹಿಂದೆ ತಾಯಿ ಮೃತಪಟ್ಟಿದ್ದರು. ಆದ್ದರಿಂದ ಆಕೆ ಕಳೆದ ಸ್ವಲ್ಪ ಸಮಯದಿಂದ ಅತ್ತೆ ಮೋಲಿ ಟೆಲ್ಲಿಸ್ ಮನೆಯಲ್ಲಿ ವಾಸವಿದ್ದಳು. ತಂದೆ ಆಲ್ಬರ್ಟ್ ಡಿ’ಸೋಜಾ ಮುಂಬಯಿಯಲ್ಲೇ ಇದ್ದಾರೆ. ನವೆಂಬರ್ 9ರಂದು ಅತ್ತೆ ಚರ್ಚ್‌ಗೆ ಹೋಗಿದ್ದ ವೇಳೆ ಮರಿಯಾ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!